(www.vknews.in) : ಮೇನಾಲ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಕ್ರೀಡಾಕೂಟವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೆಟ್ಟಣಿಗೆ ಮುಡನ್ನೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ.ಫೌಝಿಯಾ ಇಬ್ರಾಹಿಂ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ, ಸಂಸ್ಥೆಯ ಆಡಳಿತಾಧಿಕಾರಿ ಅಬ್ದುಲ್ ರೆಹಮಾನ್ ,ಸಹಾಯಕ ಮುಖ್ಯ ಶಿಕ್ಷಕಿ ಯಾದ ಕುಮಾರಿ. ಶ್ವೇತಮರಿಯಾ ಡಿ ಸೋಜ ರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ನಂತರ ವಿಧ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು, ಶಾಲಾ ವಿದ್ಯಾರ್ಥಿ ನಾಯಕಿ ಯಾದ ಕುಮಾರಿ. ಫಾತಿಮತ್ ಮುಭಾಶಿರ ರವರು ಪ್ರತಿಜ್ಞಾ ಸ್ವೀಕಾರ ವಿಧಿಯನ್ನು ನಡೆಸಿಕೋಟ್ಟರು. ಗಿಡಕ್ಕೆ ನೀರು ಉಣಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ ಶಿಕ್ಷಕಿಯಾದ ಶ್ರೀಮತಿ .ಶೇಕ್ ಝಹಿರಾ ಬಾನು ರವರು ಶ್ರೀಮತಿ.ಫೌಝಿಯಾ ಇಬ್ರಾಹಿಂರವರ ಕಿರುಪರಿಚಯವನ್ನು ವಾಚಿಸಿದರು ಹಾಗೂ ಗೌರವಾನ್ವಿತ ಅತಿಥಿ ಯಾದ ಶ್ರೀಮತಿ.ಫೌಝಿಯಾ ಇಬ್ರಾಹಿಂ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಂದಂತಹ ಅತಿಥಿಗೆ ಶಾಲೆಯ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ರವರು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಅಥ್ಲಟಿಕ್ಸ ಆಯೋಜಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಶಿಕ್ಷಕಿ ಯಾದ ಶಫ್ರಿನಾ ಪಿ.ವಿ ಸ್ವಾಗತಿಸಿ, ಶಿಕ್ಷಕಿ ಪ್ರತೀಕ್ಷ ವಂದಿಸಿದರು ಹಾಗೂ ಶಿಕ್ಷಕಿಯಾದ ಶ್ರೀಮತಿ ಶೇಕ್ ಝಹಿರಾ ಬಾನು ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.