ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಎರಡನೇ ಹಂತದ ಮುಜಾಲಸ ತರಬೇತಿ ಶಿಬಿರವು ನೂರ್ ಅಲ್ ಅಮ್ರೀನ್ ಫಾರ್ಮ್ ಹೌಸ್ ನಲ್ಲಿ ನಡೆಯಿತು.
ಜುಮಾ ನಮಾಝಿನ ಬಳಿಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸೈಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ದುಆಕ್ಕೆ ನೇತೃತ್ವ ನೀಡಿದರು.
ಅಜ್ಮೀರ್ ಖ್ವಾಜಾ (ಖ.ಸಿ) ರವರ ಅನುಸ್ಮರಣಾ ಮಜ್ಲಿಸ್ ನೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರು ಉದ್ಘಾಟಿಸಿದರು. ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಉಮರ್ ಸಖಾಫಿ ಒಮಾನ್ ರವರು ನಾಯಕರಾಗಲಿರುವ ಅಂಶಗಳು ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ನುಖೈಬ್ ಗಳಿಗೆ ಮನದಟ್ಟು ಮಾಡಿಕೊಟ್ಟರು.
ಕೆಸಿಎಫ್ ಒಮಾನ್ ಡೆಸ್ಸೆನಿಯಂ ಕಮಿಟಿ ಚೆಯರ್ಮಾನ್ ಜನಾಬ್ ಇಕ್ಬಾಲ್ ಬೊಳ್ಮಾರ್ ಬರ್ಕರವರು ಕೆಸಿಎಫ್ ಐಸಿ ದಶಮಾನೋತ್ಸವದ ಭಾಗವಾದ ಡೆಸ್ಸೆನಿಯಂ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಕೆಸಿಎಫ್ ಐಸಿ ಇಹ್ಸಾನ್ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್, ರಾಷ್ಟ್ರೀಯ ನಾಯಕರು, ನಕೀಬ್ ರವರುಗಳು ಹಾಗೂ ನುಖೈಬ್ ರವರುಗಳು ಉಪಸ್ಥಿತರಿದ್ದರು
ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.