ಬಂಟ್ವಾಳ (www.vknews.in) : ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ 16 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.24 ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಈ ಬಾರಿ ಮುಂಬಯಿ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ಯವರ ಸಾರಥ್ಯದಲ್ಲಿ ನಡೆಯಲಿದೆ.
ಆಡಂಬರದ ಮದುವೆಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಬಡವರಿಗೆ ಸಾಮೂಹಿಕವಾಗಿ ಸಮಾಜದ ಅನೇಕರ ಪ್ರೋತ್ಸಾಹದಿಂದ ಮದುವೆ ನಡೆಸುತ್ತಾ ಬಂದಿದ್ದು ಕಳೆದ 15 ವರ್ಷಗಳಲ್ಲಿ ಒಟ್ಟು 467 ಜೋಡಿ ಮದುವೆ ನಡೆಸಲಾಗಿದ್ದು, ಈ ಬಾರಿ ಭಜನಾ ಸ್ಪರ್ದೆ ಹಾಗೂ ಇನ್ನಿತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಮದುವೆ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಾಗೂ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜೊತೆಗೆ ಅನೇಕ ಸಾಧಕರಿಗೆ ಸನ್ಮಾನ ನಡೆಸುತ್ತೇವೆ ಎಂದು ಅವರು ತಿಳಿಸಿದರು. ಮಾ.17 ರಂದು ವಿವಾಹದ ಪೂರ್ವಭಾವಿಯಾಗಿ ನೊಂದಾಯಿತ ಜೋಡಿಗಳಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ.
ವಿವಾಹ ಅಪೇಕ್ಷಿತ ವಧು-ವರರು ಫೆ.20 ರ ಮೊದಲು ಹೆಸರನ್ನು ನೊಂದಾಯಿಸಬೇಕಾಗಿ ವಿನಂತಿ ಮಾಡಿದ್ದಾರೆ. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತು ಸಂಚಾಲಕ ರಾಜೇಶ್ ಪುಂಜಾಲಕಟ್ಟೆ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.