(www.vknews.in) : ಬಹಳಷ್ಟು ನಿರೀಕ್ಷೆ ಮೂಡಿಸಿರುವ ಧರ್ಮ ದೈವ ತುಳು ಚಿತ್ರದ ಶೀರ್ಷಿಕೆ ಹಾಡು ಇತ್ತೀಚಿಗೆ ಕಾರ್ಣಿಕದ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದಲ್ಲಿ ಬಿಡುಗಡೆಗೊಂಡಿದ್ದು ಎಲ್ಲರ ಮನಗೆದ್ದಿದೆ. ನಿಶಾನ್ ರೈ ಮಠಂತಬೆಟ್ಟು ಧರ್ಮ ದೈವ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿದ್ದಾರೆ. ಚಿತ್ರದ ಅವರ ಮೊದಲ ಹಾಡೇ ಅವರೊಳಗಿನ ಪ್ರತಿಭೆಯನ್ನು ಹೊರಚೆಲ್ಲಿದೆ. ಈ ಹಾಡಿಗೆ ಹಿರಿಯ ಸಾಹಿತಿ ಕೆ. ಕೆ ಪೇಜಾವರ ಸಾಹಿತ್ಯ ಬರೆದಿದ್ದು ತುಳುನಾಡಿನ ಗಾನಗಂಧರ್ವ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ “ಓ ಧರ್ಮ ದೈವ” ಹಾಡಿಗೆ ಜೀವವನ್ನೇ ನೀಡಿದ್ದು ಇದೀಗ ತುಳುನಾಡಿನಲ್ಲಿ ಈ ಹಾಡು ಮನೆಮಾತಾಗಿದೆ.
ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್ ಚಿತ್ರದ ಹಾಡು ಮತ್ತು ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪಟ್ಲ ಸತೀಶ್ ಶೆಟ್ಟಿ ಗಾಯನ ಹಾಗು ನಿಶಾನ್ ಅವರ ಸಂಗೀತ ಮತ್ತು ಕೆ. ಕೆ ಪೇಜಾವರ ಅವರ ಸಾಹಿತ್ಯದ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಶ್ರೇಯಸ್ ಧರ್ಮ ದೈವ ಚಿತ್ರದ ಮೊದಲ ಪೋಸ್ಟರ್ ಕೂಡ ಬಿಡುಗಡೆಗೊಳಿಸಿದ್ದರು.ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದ್ದು ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ, ಪುಷ್ಪರಾಜ್ ಪುಷ್ಪರಾಜ್ ಬೊಳ್ಳಾರ್ ,ರೂಪ ವರ್ಕಡಿ,ರಂಜನ್ ಬೋಳಾರ್ ಮುಂತಾದವರು ನಟಿಸಿದ್ದು ಅರುಣ್ ರೈ ಪುತ್ತೂರು ಛಾಯಾಗ್ರಾಹನ ಮಾಡಿದ್ದಾರೆ ಚಿತ್ರವನ್ನು ನಿತಿನ್ ರೈ ನಿರ್ದೇಶಸಿದ್ದು ರಾಕೇಶ್ ಭೋಜರಾಜ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.