ಯು.ಎ.ಇ(ವಿಶ್ವ ಕನ್ನಡಿಗ ನ್ಯೂಸ್): ಯುಎಇ ಜನರಲ್ ಅಥಾರಿಟಿ ಆಫ್ ಇಸ್ಲಾಮಿಕ್ ಅಫೇರ್ಸ್ ಅಂಡ್ ಎಂಡೋಮೆಂಟ್ ಪ್ರಾಯೋಜಿಸಿದ ಅಂತಾರಾಷ್ಟ್ರೀಯ ಕಿರಾತ್ ಸ್ಪರ್ಧೆಯಲ್ಲಿ ಅತೀಯಾ ವಿಜ್ದಾನ್ ಪ್ರಥಮ ಸ್ಥಾನ ಗಳಿಸಿದ್ದಾರೆ.ಕರ್ನಾಟಕ ಕೇರಳ ರಾಜ್ಯದ ಗಡಿನಾಡು ಕಾಸರಗೋಡಿನವರಾದ ಅತಿಯಾ ವಿಜ್ದಾನ್,5000 ದಿರ್ಹಮ್ ಮೊತ್ತದ (1.25 ಲಕ್ಷ ಭಾರತೀಯ ರೂಪಾಯಿ) ಬಹುಮಾನದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಳೆದ ವರ್ಷ ನಡೆದ ಕಶಾರಾ ಆನ್ಲೈನ್ ಇಂಟರ್ನ್ಯಾಶನಲ್ ಸ್ಪರ್ಧೆಯಲ್ಲೂ ಅತಿಯಾ ಪ್ರಥಮ ಸ್ಥಾನ ಪಡೆದಿದ್ದರು.ಪ್ಲಸ್ ಟು ವಿದ್ಯಾರ್ಥಿನಿಯಾಗಿರುವ ಅತೀಯಾ,ಮರ್ಹೂಮ್ ಎಂ.ಇ.ಅಬ್ದುಲ್ ಹಕೀಂ ಮೌಲವಿ ಹಾಗು ಯಾಕೂಬ್ ಕಲ್ಲಂಗಳ ರವರ ಮೊಮ್ಮಗಳು ಮತ್ತು ಅತೀಕ್ ರೆಹಮಾನ್ ಅಲ್ ಫೈದಿ ಮತ್ತು ಜಹ್ರಾ ಬಾನು ದಂಪತಿಯ ಪುತ್ರಿ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.