ಅರಂತೋಡು (www.vknews.in) : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಬಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ 99, ಇಂಗ್ಲಿಷ್ 94, ಇತಿಹಾಸ 98, ಅರ್ಥಶಾಸ್ತ್ರ 95 , ಸಮಾಜಶಾಸ್ತ್ರ 97 ಮತ್ತು ರಾಜ್ಯ ಶಾಸ್ತ್ರ 94 ಅಂಕಗಳೊಂದಿಗೆ ಕಾಲೇಜಿನ ಶೈಕ್ಷಣಿಕ ಸಾಧನೆಯಲ್ಲಿ ಹೊಸ ದಾಖಲೆಯ 577 ಅಂಕ ಪಡೆದು ಗ್ರಾಮೀಣ ಪ್ರದೇಶದ ಕಾಲೇಜಿಗೆ ಕೀರ್ತಿ ತಂದುಕೊಟ್ಟಿದ್ದಾರೆ.
ಇವರು ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀಮತಿ ಸರೋಜ ಮತ್ತು ಶ್ರೀ ವಸಂತ ದಂಪತಿಗಳ ಪುತ್ರಿ. ಇವರು ಉತ್ತಮ ಅಂಕಗಳನ್ನು ಗಳಿಸಿ ಸಾಧನೆಗೈದು ಕುಟುಂಬಕ್ಕೆ ಮತ್ತು ಊರಿಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.