ಹೈದರಾಬಾದ್ (www.vknews.in) : ಹೈದರಾಬಾದ್ ನ ಗಾಯತ್ರಿ ನಗರದಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರದೇಶವೊಂದರಲ್ಲಿ ತನ್ನ ಸಹೋದರಿಯೊಂದಿಗೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವೊಂದು ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ದೀಪಾಲಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀದಿ ನಾಯಿಗಳನ್ನು ಸ್ಥಳೀಯರು ಬೆದರಿಸಿ ಓಡಿಸಿದ್ದರಿಂದ ಸಂತ್ರಸ್ತ ಬಾಲಕಿಯ ಹಿರಿಯ ಸಹೋದರಿಯು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾಳೆ ಎಂದೂ ಅವರು ಹೇಳಿದ್ದಾರೆ.
ಛತ್ತೀಸ್ ಗಢ ನಿವಾಸಿಗಳಾದ ಸಂತ್ರಸ್ತ ಬಾಲಕಿಯ ಕುಟುಂಬವು ಉತ್ತಮ ಬದುಕಿಗಾಗಿ ಹೈದರಾಬಾದ್ ಗೆ ವಲಸೆ ಬಂದಿತ್ತು ಎಂದು ಹೇಳಲಾಗಿದೆ. ಇಬ್ಬರೂ ಪೋಷಕರು ದಿನಗೂಲಿಗಳು ಎಂದು ತಿಳಿದು ಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.