(www.vknews. in) ; ಝೆನಿತ್ ಆಂಗ್ಲ ಮಾಧ್ಯಮ ಶಾಲೆ, ಮುಡಿಪು. ಇಲ್ಲಿನ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಪ್ಲೇ ಸ್ಕೂಲನ್ನು ದಿನಾಂಕ 20-04-2024 ರ ಶನಿವಾರ ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಬಹ|| K.S.ಅಟ್ಟಕೋಯ ತಂಙಳ್ ಕುಂಬೋಲ್ರವರು ನೂತನ ಕೊಠಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಅಲ್-ಅನ್ಸಾರ್ ವಾರಪತ್ರಿಕೆಯ ಸಂಪಾದಕರಾದ ಜ|| ಸಿದ್ದೀಕ್ ಮೊಂಟುಗೋಳಿ, ಹಾಗೂ ರಫೀಕ್ ಮಾಸ್ಟರ್ರವರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜ| ಅಬ್ದುಲ್ ಮಜೀದ್, ಆಡಳಿತಾಧಿಕಾರಿ ಮೊಯಿದಿನ್ ಕುಂಞಿ, ಟ್ರಸ್ಟಿ ಬಶೀರ್, ನ್ಯಾಯವಾದಿ ಅಸ್ಗರ್ ಮುಡಿಪು, ಗೌಸಿಯ ಜುಮಾ ಮಸೀದಿಯ ಖತೀಬ್, ಸಂಚಾಲಕಿ ನಹಾದ M, ಮುಖ್ಯಶಿಕ್ಷಕಿ ಸಫೂರ K.E. ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.