ಕಾಣಿಯೂರು (www.vknews. in) : ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ಬಡವರ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸ ಸಿಗುವಂತಾಗಲಿ ಎಂಬ ನಿಟ್ಟಿನಲ್ಲಿ ಪಳ್ಳತ್ತಾರು ಶಾಲೆಯ ಎಸ್ಡಿಎಂಸಿ ಹಾಗೂ ಪೋಷಕರು ಇತ್ತೀಚೆಗೆ ಪೂರ್ವ ಪ್ರಾಥಮಿಕ ತರಗತಿ ಎಲ್ಕೆಜಿ -ಯುಕೆಜಿ ಆರಂಭಿಸಿದ್ದರು.
ಮಕ್ಕಳ ಸಂಖ್ಯೆ ಜಾಸ್ತಿಯಾಗಿ ತರಗತಿ ನಡೆಸಲು ಸ್ಥಳಾವಕಾಶದ ಕೊರತೆಯಾದಾಗ ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಿ ಕಟ್ಟಡದ ಕೆಲಸ ಆರಂಭಿಸಿದಾಗ ಪಳ್ಳತ್ತಾರು ಶಾಲೆಯ ಹಳೆ ವಿದ್ಯಾರ್ಥಿಗಳು ಜೂ 21 ರಂದು ರಾತ್ರಿ ಶಾಲೆಯ ಅಭಿವೃದ್ಧಿಗಾಗಿ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಉಮರ್ ಶಾಫಿ, ಎಸ್ಡಿಎಂಸಿ ಕೇಂದ್ರ ಸಮಿತಿಯ ನಿರ್ದೇಶಕ ನವಾಝ್ ಸಖಾಫಿ,ಉಮೇಶ್ ಬನಾರಿ,ಹನೀಫ್ ಪಾರೆ,ಮರ್ಶಾದ್ ಗುಂಡಿನಾರು,ರಫೀಕ್ ಗುಂಡಿನಾರು ಜಾಬಿರ್ ಪಳ್ಳತ್ತಾರು,ಸಿನಾನ್ ಬನಾರಿ,ರಾಶಿದ್ ದೇವರಗುಡ್ಡೆ,ರಝಾಕ್ ಪಳ್ಳತ್ತಾರು,ಸಹೀದ್ ಕೂಂಕ್ಯ,ಸಂಸುದ್ದೀನ್ ಏರಿಮಾರ್,ಹಂಝು ಗುಂಡಿನಾರು,ಅನಸ್ ಕೂಂಕ್ಯ ಮೊದಲಾದವರು ಭಾಗವಹಿಸಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.