ಮಂಗಳೂರು (www.vknews. in) : ಕೇಂದ್ರ ಬಿಜೆಪಿ ಸರಕಾರದ ಅವ್ಯವಸ್ಥೆಯಿಂದಾಗಿ ಯುಜಿಸಿ-ಎನ್ ಇ ಟಿ ಪರೀಕ್ಷೆ ರದ್ದಾಗಿದ್ದು, ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಿದೆ. ಇದನ್ನು ಖಂಡಿಸಿ ಎನ್ ಎಸ್ ಯು ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದ ಬಳಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಎನ್ ಟಿ ಎ ನಡೆಸುವ ಕೇಂದ್ರಿಕೃತ ಎನ್ ಇ ಇ ಟಿ ಪರೀಕ್ಷೆಯನ್ನು ರದ್ದುಪಡಿಸಿ, ಎನ್ ಇ ಇ ಟಿ ಪರೀಕ್ಷೆ ನಡೆಸಲು ಆಯಾ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎನ್ ಎಸ್ ಯು ಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಸುಖ್ವಿಂದರ್ ಸಿಂಗ್, ನಜೀಬ್ ಮಂಚಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಫ್ವಾನ್ ಸರವು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ರೋನ್ಸ್ಟನ್ ಸಿಕ್ವೇರಾ, ವಿಶಾಲ್, ಸೋಹಾನ್, ಸೃಜನ್, ಫಾರೂಕ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.