(www.vknews.in) ; ಉಪ್ಪಿನಂಗಡಿ ಪಂಚಾಯತ್ ಹಾಗೂ ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿ ಆಗುವುದರ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ಇದ್ದಾರೆ.
ಪಂಚಾಯತ್ ನಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳು, ನೈರ್ಮಲ್ಯ ಸಮಿತಿಯ ಸದಸ್ಯರು ದಿನ ನಿತ್ಯ ಸಂಚರಿಸುವ ಸ್ಥಳದಲ್ಲಿ ಕೂಡ ಒಂದು ಉತ್ತಮವಾದ ಚರಂಡಿ ನಿರ್ಮಾಣ ಮಾಡದೆ ಇರುವ ಬಗ್ಗೆ , ಹಾಗೂ ಕಂಡು ಕಾಣದಂತೆ ನಡೆಯುವ ಇವರ ವರ್ತನೆಯನ್ನು ಜನರು ಆಶಂಕೆಯಿಂದ ನೋಡುತ್ತಿದ್ದಾರೆ.
ರಾಜ್ಯದಲ್ಲಿಯೇ ಅತೀ ಹೆಚ್ಚು ವರಮಾನ ಇದ್ದೂ ಕೂಡ ಜನರಿಗೆ ಬೇಕಾದ ಮೂಲಭೂತ ಸೌಕರ್ಯದಿಂದ ಉಪ್ಪಿನಂಗಡಿಯು ನಲುಗುತ್ತಿರುವುದು ಮಾತ್ರ ಸುಳ್ಳಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.