ಪುತ್ತೂರು (www.vknews. in) ; ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 2024-25ನೇ ಸಾಲಿನ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ಜು. 06 ರಂದು ಪುತ್ತೂರು ಬೆಥನಿ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಪ್ರಶಾಂತಿರವರ ನೇತೃತ್ವದಲ್ಲಿ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯು ನಡೆಯಿತು. ನೂತನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಪಿ.ಎ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಇದರ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್.ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಪ್ರತಿಕ್ಷ ಪೈ, ಉಪಾಧ್ಯಕ್ಷರಾಗಿ ಶ್ರೀಯುತ ಪುಷ್ಪರಾಜ್ ಗಂಭೀರ್ ಆಯ್ಕೆಯಾದರು.
ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿಯವರಾದ, ಶ್ರೀಮತಿ ಗ್ರೀಷ್ಮ ರವರು ಸ್ವಾಗತಿಸಿ, ಶ್ರೀಮತಿ ಶರಲ್ ರವರು ವಂದಿಸಿ, ಶ್ರೀಮತಿ ವೀಣಾ ಹಾಗೂ ಕುಮಾರಿ ಅನ್ವಿತಾ ರವರು ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಸೆಲಿನ್ ಪೇತ್ರ ಶಾಲಾ ವಾರ್ಷಿಕ ಯೋಜನೆಯನ್ನು ಸವಿಸ್ತಾರವಾಗಿ ಸಭೆಯ ಮುಂದಿಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.