ಬಂಟ್ವಾಳ (www.vknews. in) : ಸಂವಾದ ಯುವ ಮುನ್ನಡೆ ತಂಡದ ವತಿಯಿಂದ ನೇತ್ರಾವತಿ ನದಿ ಮಾಲಿನ್ಯದ ಕುರಿತು “ನೀರ ದಾರಿಯ ನಡೆ” ಪಾದಯಾತ್ರೆಗೆ ಬಡ್ಡಕಟ್ಟೆಯ ನದಿ ತೀರದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಪಾದಯಾತ್ರೆಗೆ ಚಾಲನೆ ನೀಡಿದ ಸಾಮಾಜಿಕ ಮುಂದಾಳು ಪ್ರಭಾಕರ ದೈವಗುಡ್ಡೆ ಮಾತನಾಡಿ, ಮಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಈ ನದಿಯನ್ನು ಮಾಲಿನ್ಯ ಮಾಡುತ್ತಿರುವುದು, ತ್ಯಾಜ್ಯಗಳನ್ನು ತಂದು ನದಿಗೆ ಸುರಿಯುವುದು, ಕೊಳಚೆ ನೀರು ನದಿಗೆ ಬಿಡುವುದು ಅಕ್ಷಮ್ಯ ಎಂದ ಅವರು ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಡ್ಡಕಟ್ಟೆ, ಬಂಟ್ವಾಳ ಪೇಟೆಯಲ್ಲಿ ಸಾರ್ವಜನಿಕರ ಜೊತೆ ನೇತ್ರಾವತಿ ನದಿ ಮಾಲಿನ್ಯದ ಬಗ್ಗೆ ಮಾತುಕತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನದಿ ಮಾಲಿನ್ಯ ಮತ್ತು ಕಾನೂನಿನ ಬಗ್ಗೆ ಸಂವಾದ ನಡೆಸಲಾಯಿತು.
ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳ ಭೇಟಿ, ನಂದಾವರ ದೇವಸ್ಥಾನದ ಅರ್ಚಕರ ಜೊತೆ ನೇತ್ರಾವತಿ ನದಿ ಮತ್ತು ದೇವಸ್ಥಾನದ ಸಾಂಸ್ಕೃತಿಕ ಬೆಸುಗೆಯ ಬಗ್ಗೆ ಮಾತುಕತೆ, ಇನೋಳಿ ಸೋಮನಾಥ ದೇವಾಲಯದ ಬೆಟ್ಟದ ಮೇಲಿನಿಂದ ನೇತ್ರಾವತಿ ಹರಿಯುವ ವಿಹಂಗಮ ನೋಟದ ವೀಕ್ಷಣೆ ನಡೆಸಲಾಯಿತು. ಇದೇ ವೇಳೆ ಪರಿಸರಕ್ಕೆ ಸಂಬಂಧಿಸಿದ ಆಶಯ ಗೀತೆಯನ್ನು ಹಾಡಲಾಯಿತು. ಯುವ ಮುಂದಾಳು ಶ್ರೇಯಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.