(www.vknews. in) SSF ಪುತ್ತೂರು ಡಿವಿಷನ್ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ, ಸ್ಟುಡೆಂಟ್ಸ್ ವಾಕಥಾನ್ ಕಾರ್ಯಕ್ರಮವು ದಿನಾಂಕ 27 07 2024ರಂದು ಪುತ್ತೂರಿನಲ್ಲಿ ನಡೆಯಿತು. ಪುತ್ತೂರು ಓಲ್ಡ್ ಸುನ್ನೀ ಸೆಂಟರ್ ಕಛೇರಿಯಿಂದ ಪ್ರಾರಂಭಗೊಂಡ ಕಾಲ್ನಡಿಗೆ ಜಾಥಾ ಅಮರ್ ಜ್ಯೋತಿ ಯಲ್ಲಿ ಕೊನೆಗೊಂಡಿತು.
ಸಲಾಂ ಹನೀಫಿ ಉಸ್ತಾದರು ಪ್ರಾರ್ಥಿಸಿದರು. ಮಿತ್ತೂರಿನ ಕೆ.ಜಿ.ಎನ್ ದಅವಾ ವಿದ್ಯಾರ್ಥಿ ಸಾಲಿಂ ಮಾಚಾರ್ ಸಂದೇಶ ಭಾಷಣಗೈದರು. ಡಿವಿಷನ್ ನಾಯಕರಾದ ಶಾಕಿರ್ ಕೊಳ್ತಿಗೆ,ಮುಹ್ಸಿನ್ ಕಟ್ಟತ್ತಾರ್,ಸಿನಾನ್ ಸಅದಿ ಪಾಳ್ಯತಡ್ಕ,ರಫೀಕ್ ಕೆಮ್ಮಾಯಿ ಉಪಸ್ಥಿತರಿದ್ದರು.
ಕಾರ್ಯಕ್ರಮದುದ್ದಕ್ಕೂ ಆರಕ್ಷಕರು ಉತ್ತಮ ರೀತಿಯಲ್ಲಿ ಸಹಕರಿಸಿದರು.ಕೊನೆಯಲ್ಲಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ನವಾಝ್ ಕಬಕ ರವರು ವಂದಿಸಿದರು ಪುತ್ತೂರು ಡಿವಿಷನ್ ವ್ಯಾಪ್ತಿಯಲ್ಲಿನ ಎಲ್ಲಾ ಕ್ಯಾಂಪಸ್ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.