ದೋಹ ಕತಾರ್ (www.vknews. in) ; ಇತ್ತೀಚೆಗೆ ಕರ್ನಾಟಕ ಸಂಘ ಕತಾರ್ ಸರ್ವ ಸದಸ್ಯರ ಸಭೆಯಲ್ಲಿ ನೂತನ ಆಡಳಿತ ಸಮಿತಿಯ ರಚನೆಯನ್ನು ಮಾಡಲಾಯಿತು. ಈ ಸಭೆಯಲ್ಲಿ ನಿಕಟಪೂರ್ವ ಆಡಳಿತ ಸಮಿತಿಯ ಸದಸ್ಯರು ನೂತನ ಆಡಳಿತ ಸಮಿತಿಯ ಸದಸ್ಯರಿಗೆ ಶುಭ ಕೋರಿದರು. ಈ ಸರ್ವ ಸದಸ್ಯರ ಸಭೆಯು ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಮುಂಬೈ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಮೇಶ್ ಕೆಎಸ್ ಅವರು ಶ್ರೀ ಮಹೇಶ್ ಗೌಡ ಅವರ ಅಧ್ಯಕ್ಷತೆಯ ನಿಕಟಪೂರ್ವ ಆಡಳಿತ ಸಮಿತಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದು, ಶ್ರೀ ರವಿ ಶೆಟ್ಟಿ ಅವರ ಅಧ್ಯಕ್ಷತೆಯ ಕರ್ನಾಟಕ ಸಂಘ ಕತಾರ್ ೨೦೨೪ -೨೦೨೫ ಸಾಲಿನ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಸಲಹಾ ಸಮಿತಿ ಸದಸ್ಯರಿಂದ ನೇಮಕ ಮಾಡಲಾಯಿತು.
ಶ್ರೀ ರಮೇಶ್ ಕೂಡ್ಲೂರು ಸಿದ್ದಯ್ಯ ಅವರು ಮೂಲತಃ ಕರ್ನಾಟಕದ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದವರು ಹಾಗು ವಿಧ್ಯಾಭಾಯಸದ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಪೂರ್ಣಗೊಳೊಸಿದ್ದಾರೆ. ಇವರು ಕತಾರಿನಲ್ಲಿ ಸುಮಾರು ಒಂದುವರೆ ದಶಕದಿಂದ ನೆಲೆಸಿದ್ದು, ಪೆಟ್ರೋಕೆಮಿಕಲ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಲೀಡ್ ಇಂಜಿನಿಯರ್ ಹಾಗಿ ಕೆಲಸ ನಿರ್ವಹಿಸುತ್ತಿರುವುದುಲ್ಲದೆ, ಹಲವಾರು ಸಾಮಾಜಿಕ ಸೇವಾ ಕೈಂಕರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಇವರು ಭಾರತೀಯ ಸಂಸ್ಕೃತಿಕ ಕೇಂದ್ರದ ಅಡಿಯಲ್ಲಿ ಸ್ಥಾಪನೆಯಾಗಿರುವ ಚಲನಚಿತ್ರ ಕೂಟದ ಸಮಿತಿ ಖಜಾಂಚಿ ಹಾಗಿ ಸದಸ್ಯರಾಗಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಸಭೆಯನ್ನುದೇಶಿಸಿ ಮಾತನಾಡಿ ಕರ್ನಾಟಕ ಸಂಘ ಕತಾರಿನ ನೂತನ ಆಡಳಿತ ಸಮಿತಿಯ ಸದಸ್ಯರಿಗೆ ಶುಭಕೋರಿ, ಉಪಾಧ್ಯಕ್ಷರಾದ ಶ್ರೀ ರಮೇಶ್ ಅವರನ್ನು ಅಭಿನಂದಿಸಿದರು. ಕರ್ನಾಟಕ ಸಂಘ ಕತಾರ್ ನ ಆಡಳಿತ ಸಮಿತಿಗೆ ಇತಿಹಾಸವು ವಿಶೇಷ ಪ್ರಾಧಾನ್ಯತೆಯನ್ನು ನೀಡುತ್ತಿದೆ. ಈ ಸಂವತ್ಸರವು ಕರ್ನಾಟಕ ಸಂಘ ಕತಾರ್ ತನ್ನ ರಜತ ಮಹೋತ್ಸವವನ್ನು ಆಚರಿಸುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.