(www.vknews. in) ; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಮುಸ್ಲಿಂ ವಸತಿ ಶಾಲೆ, ಅಸೈ ಮದಕ ಮಂಗಳೂರು, ದ.ಕ ಕಳೆದ 28 ವರ್ಷಗಳಿಂದ ಬಹಳ ಉತ್ತಮ ರೀತಿಯಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಮಕ್ಕಳಿಗೆ ರಾಜ್ಯ ಪಠ್ಯಪುಸ್ತಕ ಕ್ರಮದಲ್ಲಿ ವಿಧ್ಯಾಭ್ಯಾಸ ನೀಡುತಿದ್ದು ದಕ್ಷಿಣ ಕನ್ನಡದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ.
ಈಗಾಗಲೇ ಇಲ್ಲಿನ ಹಳೆವಿದ್ಯಾರ್ಥಿಗಳು ಒಟ್ಟುಸೇರಿ ಹಳೆ ವಿಧ್ಯಾರ್ಥಿಗಳ ಸಂಘ ಕಾರ್ಯಪ್ರವರ್ತ ವಾಗಿದ್ದು ಇದೀಗ ಪ್ರಸಕ್ತ ವರ್ಷ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಬಳಿಕ ಶಾಲೆಯಲ್ಲಿ ಹಳೆ ವಿಧ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ಹಳೆ ವಿಧ್ಯಾರ್ಥಿಗಳ ಕ್ರಿಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ 1996 ರಿಂದ ಈವರೆಗೆ ವಿಧ್ಯಾಭ್ಯಾಸಗೈದ ಹಳೆ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಲಾ ಆಡಳಿತ ಮಂಡಳಿಯು ಈ ಮೂಲಕ ಆಮಂತ್ರಿಸುತ್ತಿರುದಾಗಿ ಶಾಲಾ ಪ್ರಾಂಶುಪಾಲರಾದ ಉಮರಬ್ಬ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.