(www.vknews. in) ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ಉಪ್ಪಿನಂಗಡಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲನೇ ಶಿಕ್ಷಕ- ರಕ್ಷಕ ಸಮಿತಿಯ ಮಹಾಸಭೆಯು 10.08.2024 ರಂದು ನಡೆಯಿತು. ಶಿಕ್ಷಕ- ರಕ್ಷಕ ಸಮಿತಿಯ ಅಧ್ಯಕ್ಷರಾಗಿ ಜನಾಬ್ ಮೊಹಮ್ಮದ್ ಇಕ್ಬಾಲ್ ಜೋಗಿಬೆಟ್ಟು ಮರು ಆಯ್ಕೆ, ಮತ್ತು ಉಪಾಧ್ಯಕ್ಷರಾಗಿ ಶುಕೂರು ಮೇದರಬೆಟ್ಟು , ಖಜಾಂಚಿ ಯಾಗಿ ಮಜೀದ್ ಮಠ ಅಯ್ಕೆಯಾಗಿರುತ್ತಾರೆ.
ಶಾಲಾ ಸಂಚಾಲಕರಾದ ಶ್ರೀ ಮಾನ್ ರವೂಫ್ ಯು ಟಿ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪೋಷಕರ ಸಹಕಾರ ಪ್ರಮುಖವಾಗಿದೆ ಎಂದರು. ಶಾಲಾ ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಪ್ರಾಸ್ತಾವಿಕ ಮಾತನಾಡಿ ಬಹುಮುಖ ಕ್ಷೇತ್ರದಲ್ಲಿ ಮಕ್ಕಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ವಾರ್ಷಿಕ ವರದಿಯನ್ನು ಶ್ರೀಮತಿ ಅರುಣಾ , ಮುಖ್ಯೋಪಾಧ್ಯಾಯರು ಮತ್ತು ಕನ್ನಡ ಶಿಕ್ಷಕರಾದ ಅವರು ಮಂಡಿಸಿದರು .ಶ್ರೀಮತಿ ತಾಹಿರ ಎಲ್ಲರನ್ನು ಸ್ವಾಗತಿಸಿದರು.ಮತ್ತು ಶ್ರೀಮತಿ ಶಮೀನಾ ಕಾರ್ಯಕ್ರಮ ಸಂಯೋಜಿಸಿದರು ಮತ್ತು ಶ್ರೀಮತಿ ಬಲ್ಕೀಸ್ ಬಾನು ವಂದಿಸಿದರು. ಕಾರ್ಯಕ್ರಮದಲ್ಲಿ ಇತರ ಸಹ ಶಿಕ್ಷಕರಾದ ಶ್ರೀಮತಿ ಉಷಾ ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.