(www.vknews.in) : ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಮೇನಾಲ ಇಲ್ಲಿ 78ನೇ ಸ್ವಾತಂತ್ರೋತ್ಸವ ಪ್ರಾಂಶುಪಾಲರಾದ ರಜೀಸ್ ಕುಮಾರ್ ರವರು ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಮುಖ್ಯ ಅತಿಥಿಗಳಾಗಿ ಅಡ್ವೈಸರಿ ಬೋರ್ಡ್ ಸದಸ್ಯರಾದ ಶ್ರೀಯುತ ರಹ್ಮಾನ್ ಹಾಜಿ ಮೇನಾಲ ರವರು ಹಿತವಚನ ನೀಡಿದರು.
ವಿದ್ಯಾರ್ಥಿಗಳ ಶಿಸ್ತಿನಿಂದ ಕೂಡಿದ ಮಾರ್ಚ್ ಪಾಸ್ಟ್ ಮತ್ತು ರಂಗು ರಂಗಿನ ನೃತ್ಯ ನೋಡುಗರ ರೋಮಾಂಚನ ಗೊಳಿಸುವಂತಿತ್ತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.ವಿದ್ಯಾರ್ಥಿಗಳಿಗೆ ಭಾಷಣ ಹಾಡು ನೃತ್ಯ ಮೊದಲಾದ ವಿವಿಧ ಮನೋರಂಜನಾ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಕೊನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಕ್ಯಾಂಪಸ್ ಡೈರೆಕ್ಟರ್ ಅಬ್ದುಲ್ಲಾ ಮಧುರಾ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಅಡ್ಮಿನ್ ಆಫೀಸರ್ ನಾಸೀರ್ ಮ್ಯಾನೇಜರ್ ರೈಹಾನಾ ಶಿಕ್ಷಕ ವೃಂದ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.