ಮಂಗಳೂರು (www.vknews.in) ; 78ನೇ ಸ್ವಾತಂತ್ರ್ಯೋತ್ಸವವನ್ನು ಪಿಎ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ (ಮಂಗಳೂರು ಕ್ಯಾಂಪಸ್)ನ ಪಿಎ ನಾಲೆಡ್ಜ್ ಸಿಟಿ ಕ್ಯಾಂಪಸ್ನಲ್ಲಿ ಆಚರಿಸಲಾಯಿತು. ಪಿಎ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಿನ್ಸಿಪಾಲ್ ಡಾ. ಸಜೀಶ್ ರಘುನಾಥನ್ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಪೂರ್ವದ ಭಾರತದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದರು ಮತ್ತು ಆರ್ಥಿಕ ಮಹಿಮೆಯನ್ನು ಪುನಃ ಸಂಪಾದಿಸಲು ಯುವಕರು ಸಂಪೂರ್ಣವಾಗಿ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ರಮಿಝ್ ಎಂ.ಕೆ, ಪಿ.ಎ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸಲೀಮುಲ್ಲಾ ಖಾನ್, ಡಾ. ಶರ್ಮಿಲಾ ಕುಮಾರಿ ಮತ್ತು ಪ್ರೊ. ಸಮೀರ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪಿ.ಎ ಫಸ್ಟ್ ಗ್ರೇಡ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸರ್ಫರಾಜ್ ಜೆ ಹಶಿಮ್, ಪಿಎ ಎಜುಕೇಷನಲ್ ಟ್ರಸ್ಟ್ ಸಂಸ್ಥೆಗಳ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಸಯ್ಯದ್ ಅಮೀನ್ ಅಹಮ್ಮದ್, ಪ್ರೊ. ಇಸ್ಮಾಯಿಲ್ ಖಾನ್, ಡಾ. ಹರಿಕೃಷ್ಣನ್, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಇಕ್ಬಾಲ್, ಶಾರೀರಿಕ ಶಿಕ್ಷಣ ನಿರ್ದೇಶಕರು, ಕಾರ್ಯಕ್ರಮವನ್ನು ಸಂಯೋಜಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.