(www.vknews.in) ; ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ತಮ್ಮ ವಾರ್ಷಿಕ ರಜೆ ಪ್ರಯುಕ್ತ ಮಾತೃಭೂಮಿಗೆ ಭೇಟಿ ನೀಡಿದ ಅವಧಿಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಶ್ರೀ ಬಿ ವೈ ರಾಘವೇಂದ್ರ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ಈ ಸಮಯದಲ್ಲಿ ಉಭಯ ಕುಶಲೊಪರಿ ಚರ್ಚಿಸಿದ ಗಣ್ಯರು ಸುಮಾರು ಐದು ವರ್ಷಗಳ ಹಿಂದೆ ಕರೋನ ಮಹಾಮಾರಿಯ ತಾಂಡವದ ಕಾಲದಲ್ಲಿ ಶ್ರೀ ಬಿ ವೈ ರಾಘವೇಂದ್ರ ಅವರು ಕತಾರಿನಲ್ಲಿದ್ದ ಕನ್ನಡಿಗರಿಗೆ ಮಾತ್ರವಲ್ಲದೆ ಭಾರತೀಯರಿಗೆ ಒಂದೇ ಭಾರತ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ತಾಯ್ನಾಡಿಗೆ ಹಿಂದಿರುಗಲು ವಿಶೇಷ ವಿಮಾನ ಸೇವೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತಮ್ಮ ಅತ್ಯಮೂಲ್ಯ ಸಮಯ ಹಾಗೂ ಪರಿಶ್ರಮ ನೀಡಿರುವುದನ್ನು ಜ್ಞಾಪಿಸಿಕೊಳ್ಳುತ್ತಾ ಕೃತಜ್ಞತೆಗಳನ್ನು ಸಲ್ಲಿಸಿದರು.
ಮುಂಬರುವ ದಿನಗಳಲ್ಲೂ ಶ್ರೀ ಬಿ ವೈ ರಾಘವೇಂದ್ರ ಅವರ ಅಭಯ ಹಸ್ತ ಹಾಗೂ ಸಹಕಾರವು ಕತ್ತರಿನ ಜನರ ಮೇಲಿರಲೆಂದು ಕೋರುತ್ತಾ ಶ್ರೀ ಸುಬ್ರಮಣ್ಯ ಅವರು ಲೋಕಸಭಾ ಸದಸ್ಯರಿಗೆ ವಂದನೆಗಳನ್ನು ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.