ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1499 ನೇ ಜನ್ಮ ದಿನಾಚರಣೆಯ ಭಾಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಅಯೋಜಿಸಲ್ಪಡುವ ಬೃಹತ್ ಮೀಲಾದ್ ಸಮಾವೇಶಕ್ಕೆ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ದಿನಾಂಕ 18-08-2024 ರಂದು KCF ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಯ್ಯೂಬ್ ಕೋಡಿ ರವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು.
*“ಮುತ್ತು ನಬಿ ﷺ ಮಾನವೀಯತೆಯ ಮಾರ್ಗದರ್ಶಿ”* ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟಂಬರ್ 27 ರಂದು ವಿಜೃಂಭಣೆಯಿಂದ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೌಲಾನ NKM ಶಾಫಿ ಸಅದಿ ಬೆಂಗಳೂರು ಹುಬ್ಬುರ್ರಸೂಲ್ (ಸ.ಅ) ಪ್ರಭಾಷಣ ಹಾಗೂ ಮದೀನಾದ ಮದ್ಹ್ ಗೀತೆಗಳ ಮೂಲಕ ಗುರಿತಿಸಿಕೊಂಡಿರುವ ಮುಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ರವರು ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ. ಹಾಗೂ ಇನ್ನಿತರ ಪ್ರಗಲ್ಭ ಸಯ್ಯಿದರು, ಉಲಮಾ, ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದರು.
ಮೀಲಾದ್ ಸ್ವಾಗತ ಸಮಿತಿಯ ಚೇರ್ಮೇನ್ ಆಗಿ ಸಯ್ಯಿದ್ ಆಬಿದ್ ಅಲ್ ಐದರೂಸಿ ತಂಙಳ್ ಹಾಗೂ ಕನ್ವೀನರ್ ಆಗಿ ಅಬ್ಬಾಸ್ ಮರಕ್ಕಡ, ಫೈನಾನ್ಸ್ ಕಂಟ್ರೋಲರಾಗಿ ಹಾಜಿ ಇಕ್ಬಾಲ್ ಬರಕ, ವೈಸ್ ಚೇರ್ಮೇನ್ ಆಗಿ ಖಲಂದರ್ ಬಾಷಾ ತೀರ್ಥಹಳ್ಳಿ, ಹಾಗೂ ವೈಸ್ ಕನ್ವೀನರ್ ಆಗಿ ಇಕ್ಬಾಲ್ ಸೊಹಾರ್ ಹಾಗೂ ಅಂತರಾಷ್ಟ್ರೀಯ ಸಮಿತಿಯ ನಾಯಕರಾದ ಜನಾಬ್ ಹಂಝ ಹಾಜಿ ಕನ್ನಂಗಾರ್, ರಾಷ್ಟ್ರೀಯ ಸಮಿತಿಯ ನಾಯಕರಾದ ಆರಿಫ್ ಕೋಡಿ ಮತ್ತು ನವಾಝ್ ಮಣಿಪುರ ರವರನ್ನು ಸ್ವಾಗತ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಸಿದ್ದೀಖ್ ಮಾಂಬಿಳಿ ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.