ಬೆಂಗಳೂರು (www.vknews.in) : ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ತನ್ನ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಬೊಮ್ಮಾಯಿ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ಧವೂ ನಿರ್ಬಂಧಕಾಜ್ಞೆ ಹೇರುವಂತೆ ಅರ್ಜಿಯಲ್ಲಿ ಅವರು ಕೋರಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಿಜೆಪಿ ನಾಯಕರನ್ನು ತರಾಟೆಗೆತ್ತಿಕೊಂಡಿದ್ದು, ದಮ್ಮು ತಾಕತ್ತಿನ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.
ದಮ್ಮು ತಾಕತ್ತಿನ @BJP4Karnataka ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ? ಮಾಜಿ ಮುಖ್ಯಮಂತ್ರಿ @BSBommai ಅವರೂ ಕೂಡ ತಮಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತರಲು ಕೋರ್ಟ್ ಮೆಟ್ಟಿಲೇರಿದ ಸುದ್ದಿ ಬಂದಿದೆ, ಬೊಮ್ಮಾಯಿಯವರಿಗೆ ಕಾಡುತ್ತಿರುವ ಭೀತಿಯಾದರೂ ಯಾವುದು?ಈ ಭೀತಿಗೆ ಕಾರಣವಾಗುವಂತಹ ಯಾವ ಘನಂದಾರಿ… pic.twitter.com/Jw9yeCg9Nz — Karnataka Congress (@INCKarnataka) August 28, 2024
ದಮ್ಮು ತಾಕತ್ತಿನ @BJP4Karnataka ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ?
ಮಾಜಿ ಮುಖ್ಯಮಂತ್ರಿ @BSBommai ಅವರೂ ಕೂಡ ತಮಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತರಲು ಕೋರ್ಟ್ ಮೆಟ್ಟಿಲೇರಿದ ಸುದ್ದಿ ಬಂದಿದೆ,
ಬೊಮ್ಮಾಯಿಯವರಿಗೆ ಕಾಡುತ್ತಿರುವ ಭೀತಿಯಾದರೂ ಯಾವುದು?ಈ ಭೀತಿಗೆ ಕಾರಣವಾಗುವಂತಹ ಯಾವ ಘನಂದಾರಿ… pic.twitter.com/Jw9yeCg9Nz
— Karnataka Congress (@INCKarnataka) August 28, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.