ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಮೇ 17ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರ ಈ ಹಿಂದೆ ಎರಡು ಬಾರಿ ಲಾಕ್ ಡೌನ್ ಘೋಷಿಸಿತ್ತು. ಇದೀಗ ಮೂರನೇ ಬಾರಿಗೆ ಇನ್ನೂ ಎರಡು ವಾರಗಳಿಗೆ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯ ಇದೀಗ ಕೊರೋನಾ ಲಾಕ್ ಡೌನ್ ಅನ್ನು ವಿಸ್ತರಿಸಿರುವ ಆದೇಶ ಹೊರಡಿಸಿದ್ದು, ಮೂರು ಜೋನ್ ಗಳಾಗಿ ವಿಂಗಡಿಸಿದೆ. ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಕೆಲ ಸಡಿಲಿಕೆಗಳನ್ನು ನೀಡಿದ್ದು, ರೆಡ್ ಜೋನ್ ನಲ್ಲಿ ಎಂದಿನಂತೆ ಲಾಕ್ ಡೌನ್ ಹಿಂದಿನಂತೆ ಮುಂದುವರೆಯಲಿದೆ.
ದೇಶವ್ಯಾಪಿ ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ನಿರ್ಧಾರ ಮುಂದುವರಿಯಲಿದೆ. ಹಾಗೆಯೇ, ಶಾಲೆ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಸಿನಿಮಾ ಹಾಲ್, ಮಾಲ್ಗಳು, ಹೊಟೆಲ್, ರೆಸ್ಟೋರೆಂಟ್ಗಳ ಬಂದ್ ಮುಂದುವರಿಯುತ್ತದೆ. ಜನಜಾತ್ರೆ ಸೇರುವ ಕಾರ್ಯಕ್ರಗಳು ನಿಷಿದ್ಧ. ಪೂಜಾ ಮಂದಿರಗಳಿಗೂ ಅವಕಾಶ ಇರುವುದಿಲ್ಲ. ಮೊದಲಿದ್ದ ಇವೆಲ್ಲ ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯಲಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.