(www.vknews.com) : ದಿನಾಂಕ 1.05.2020 ಉಪ್ಪಳ ಮೊಗರ್ ರಂಜಾನ್ ಉಪವಾಸದ ಸಲುವಾಗಿ ಅರ್ಹ 55 ಕುಟುಂಬಕ್ಕೆ ಖಿದ್ಮತುಲ್ ಇಸ್ಲಾಂ ಫೌಂಡೇಶನ್ ವತಿಯಿಂದ ಕುಞಮೊನು ಚೇರಾಲ್, ಸತ್ತಾರ್ ಹಾಜಿ ಮಾಕಾಳಿ ಹಾಗು ಅಶ್ರಫ್ ಚೇಡಿ ಇವರ ಸಾರಥ್ಯದಲ್ಲಿ ಇಂದು ರಂಜಾನ್ ಕಿಟ್ ವಿತರಿಸಲಾಯಿತು.
ಎಪ್ರೀಲ್ ತಿಂಗಳ ಮೊದಲನೇ ವಾರದಲ್ಲಿ ಕೋವಿಡ್ 19 ಕೊರೋನಾ ಲಾಕ್ ಡೌನ್ ನಿಮಿತ್ತ ನಾಡಿನ ಮುಸ್ಲಿಂ ಹಾಗೂ ಹಿಂದೂ ಬಾಂಧವರನ್ನು ಒಳಗೊಂಡು 60 ಕಿಟ್ ವಿತರಣೆ ಖಿದ್ಮತುಲ್ ಇಸ್ಲಾಂ ಫೌಂಡೇಶನ್ ವತಿಯಿಂದ ನಡೆದಿತ್ತು.
ರಾಜ್ಯಾದ್ಯಂತ ಕೋವಿಡ್ 19 ಕೊರೋನಾ ಲಾಕ್ ಡೌನ್ ನಡುವೆಯು ಕಿಟ್ ಶೇಕರಣೆಗೆ ಸಂಸ್ಥೆಯ ಹಲವು ಕಾರ್ಯನಿರ್ವಾಹಕರು ಮುಂದೆ ಬಂದು ಸಾಥ್ ನೀಡಿದರು. ಇದರಲ್ಲಿ ವಿಶೇಷವಾಗಿ MCF ಮಂಗಳೂರು ಚಾರಿಟಿ ಫೋರಮ್ (ರಿ) ಸಂಸ್ಥೆಯು 15 ಕಿಟ್ ನೀಡುವುದರೊಂದಿಗೆ ನಮ್ಮ ಮುಂದಿದ್ದ ಬೇಡಿಕೆಯನ್ನು ಪೂರ್ಣಗೊಳಿಸಿತು.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಖಿದ್ಮತುಲ್ ಇಸ್ಲಾಂ ಫೌಂಡೇಶನ್ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು.
ವರದಿ – ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್ ಖಿದ್ಮತುಲ್ ಇಸ್ಲಾಂ ಫೌಂಡೇಶನ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.