ಜೆದ್ದಾ(www.vknews.in): ಕರೋನವೈರಸ್ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಸೌದಿ ಅರೇಬಿಯಾವು ಸ್ಥಳೀಯ ಮತ್ತು ವಿದೇಶಿ ಮೂಲಗಳಿಂದ ಪಡೆಯುವ ನೋಟುಗಳು ಮತ್ತು ನಾಣ್ಯಗಳನ್ನು 14 ರಿಂದ 20 ದಿನಗಳವರೆಗೆ ಕ್ವಾರಂಟೈನ್ ನಲ್ಲಿಡುತ್ತದೆ ಎಂದು ಸೌದಿ ಅರೇಬಿಯಾ ಹಣಕಾಸು ಪ್ರಾಧಿಕಾರ ತಿಳಿಸಿದೆ.
ನಾವು ಕಾಗದ ಮತ್ತು ಲೋಹದ ಕರೆನ್ಸಿಗಳನ್ನು ಅವುಗಳು ಎಲ್ಲಿಂದ ಬಂದಿದೆ ಎಂಬುದರ ಆಧಾರದ ಮೇಲೆ ಅವುಗಳನ್ನು ಸುಮಾರು 14 ರಿಂದ 20 ದಿನಗಳವರೆಗೆ ಕ್ವಾರೆಂಟೈನ್ ನಲ್ಲಿಟ್ಟು ಶುಚೀಕರಿಸಲು ಮತ್ತು ಕ್ರಿಮಿನಾಶಕಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಜನತೆಯ ಸುರಕ್ಷತೆಯನ್ಮು ಕಾಪಾಡುವುದು ನಮ್ಮ ಆದ್ಯತೆಯಾಗಿದೆ ಎಂದು ಸೌದಿ ಹಣಕಾಸು ಪ್ರಾಧಿಕಾರ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.