ಜೆದ್ದಾ(www.vknews.in): ಮುಂದಿನ ಆದೇಶದವರೆಗೆ ಎಲ್ಲಾ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಸೌದಿ ಅರೇಬಿಯನ್ ಏರ್ಲೈನ್ಸ್ (ಸೌದಿಯಾ) ಭಾನುವಾರ ಪುನರುಚ್ಚರಿಸಿತು. ಈ ಹಿಂದೆ ಜೂನ್ ತಿಂಗಳಲ್ಲಿ ಅಂತರಾಷ್ಟ್ರೀಯ ವಿಮಾನಯಾನದ ಬುಕ್ಕಿಂಗ್ ಪ್ರಾರಂಭಿಸಲು ಸೌದಿಯಾ ನಿರ್ಧರಿಸಿತ್ತು ಆದರೆ ಸೌದಿಯಲ್ಲಿ ಕೊವಿಡ್ ಮತ್ತೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಏರ್ ಲೈನ್ಸ್ ಈ ನಿರ್ಧಾರಕ್ಕೆ ಬಂದಿದೆ . ಈ ಸಮಯದಲ್ಲಿ ಸೌದಿ ನಾಗರಿಕರನ್ನು ಹೊತ್ತೊಯ್ಯುವ ಒಳಬರುವ ವಿಮಾನಗಳು ಮಾತ್ರ ಅನುಮತಿಸಲಾಗುತ್ತಿದೆ ಎಂದು ಸೌದಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಜೆದ್ದಾ ಮತ್ತು ಹೈಲ್ ನಡುವಿನ ವಿಮಾನಗಳು ಜೂನ್ 15 ರ ಸೋಮವಾರದಿಂದ ಪ್ರಾರಂಭವಾಗಲಿವೆ ಎಂದು ಟ್ವೀಟ್ ಮಾಡಿರುವ ಸೌದಿಯಾ ತನ್ನ ದೇಶೀಯ ವಿಮಾನಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.