(www.vknews.com) : ಯೇನಪೋಯ ಆಸ್ಪತ್ರೆಯಲ್ಲಿ ಹೆರಿಗೆ ನೋವಿನಲ್ಲಿ ದಾಖಲಾಗಿರುವ ಓರ್ವ ಮಹಿಳೆಗೆ ತುರ್ತು ರಕ್ತದ ಅವಶ್ಯಕತೆಯಿತ್ತು. ಅವಶ್ಯಕರ ಕರೆ PFI MEDICAL TEAM MALAR ಉಸ್ತುವಾರಿಯಾದ MK ಸಮದ್ ರವರಿಗೆ ಹೋಗುತ್ತೆ. ತಕ್ಷಣ ಕಾರ್ಯಪ್ರವರ್ತರಾದ ಸಮದ್ ರವರು ರಕ್ತದಾನಿಗಳ ಹುಡುಕಾಟದಲ್ಲಿರುವಾಗ ಒಂದು ಕರೆ ಅಮ್ಮೆಂಬಳಕ್ಕೆ ಮಾಡುತ್ತರೆ. ಉಪವಾಸದ ಸಮಯದಲ್ಲೂ ಅದರ ನಂತರದ ದಿನಗಳಲ್ಲೂ ಅದೆಷ್ಟೋ ತುರ್ತು ಸಂಧರ್ಭಗಳಲ್ಲಿ ಬೇಕಾದ ರಕ್ತವನ್ನು ಅಮ್ಮೆಂಬಳದ ಯುವಕರು ನೀಡಿರುವುದು ಮನಸ್ಸಿನಲ್ಲಿ ಇದ್ದರು ಮತ್ತೊಮ್ಮೆ ಅಮ್ಮೆಂಬಳದ ಯುವಕರಿಗೆನೇ ಕರೆ ಕೊಟ್ಟ ಕ್ಷಣ ಮಾತ್ರದಲ್ಲಿ ಇಬ್ಬರು ಯುವಕರು ಯೇನಪೋಯ ಆಸ್ಪತ್ರೆಗೆ ಬಂದು ಮುಟ್ಟುತ್ತಾರೆ.
ಅಲ್ಲಿ ಅವರಿಗಾಗಿ ನಾನು (ಶಮೀರ್) ಕಾಯುತ್ತಿದ್ದೇನೆ, ನನ್ನ ಬಳಿ ಬಂದಂತಹ ಈ ಯುವಕರೊಬ್ಬಳನನ್ನು ರೋಗಿಗೆ ಬೇಕಾದ ರಕ್ತವನ್ನು ನೀಡಲು ಲ್ಯಾಬ್ ರಕ್ತ ನಿದಿಗೆ ಕಳುಹಿಸಿ ಕೊಟ್ಟು ಹೊರಗೆ ನಾವಿಬ್ಬರು ಕಾಯುತ್ತಿರುವ ತುಸು ಸಮಯದ ನಂತರ ರಕ್ತದಾನಕ್ಕಾಗಿ ಒಳಗೋದ ಸಹೋದರ ಬಾರೀ ಬೇಜಾರಿನೊಂದಿಗೆ ಹೊರಬಂದು ನನ್ನಲ್ಲಿ ರಕ್ತ ಕಡಿಮೆ ಇದೆ ಅಂಥ ಟೆಸ್ಟ್ ರಿಪೋರ್ಟ್ ಬಂದಿದೆ. ಆದರೂ ನಾನು ವಿನಂತಿಸಿದೆ ನನ್ನನ್ನು ನೋಡಿ ಒಮ್ಮೆ ಹೇಗಿದ್ದೇನೆ ಮತ್ತೆ ಹೇಗೆ ರಕ್ತ ಕಡಿಮೆ ಅಂಥ ಪರವಾಗಿಲ್ಲ ರಕ್ತ ತೆಗೆಯಿರಿ ಅಂಥಾ ಸಹೋದರ ಸಿಬ್ಬಂದಿಯ ಬಳಿ ವಿನಂತಿಸಿದರೂ ಪ್ರಯೋಜನವಾಗಲಿಲ್ಲ ಅನ್ನುತ್ತಾನೆ.
ಇದನ್ನೆಲ್ಲಾ ಗಮನಿಸಿದ ಇನ್ನೊಬ್ಬ ಸಹೋದರ ನಾನು ರಕ್ತದಾನ ಮಾಡುವೆ ಎಂದು ನನ್ನ ಬಳಿ ತಿಳಿಸಿದಾಗ ನಾನು ಒಪ್ಪದಿದ್ದರು ಆ ಸಹೋದರ ಬಿಡುವ ಹಾಗೆ ಕಾಣಲಿಲ್ಲ, ರಕ್ತದಾನಕ್ಕಾಗಿ ಲ್ಯಾಬ್ ರಕ್ತನಿಧಿ ಗೆ ಕಳುಹಿಸಿಕೊಡಲಾಯಿತು. ಒಂದು ಹತ್ತು ನಿಮಿಷದ ನಂತರ ಒಳಗೋದ ಸಹೋದರ ಹೊರಗೆ ಬರುವುದನ್ನು ಗಮನಿಸಿ ಅವನ ಎದುರಿಗೆ ನಾನು ಹೋಗಿ ವಿಚಾರಿಸಿದಾಗ ನನಗೆ ರಕ್ತ ಕೊಡಲು ಸಾಧ್ಯವಿಲ್ಲ ರಕ್ತದಲ್ಲಿ ಸ್ವಲ್ಪ ಎಲರ್ಜಿ ಇದೆ ಅಂಥ ಟೆಸ್ಟ್ ನಲ್ಲಿ ಬಂದಿರುವುದರಿಂದ ಅದು ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುತ್ತೆ ಆದರೆ ರಕ್ತದಾನ ಮಾಡಲು ಅಸಾಧ್ಯ ಅಂಥ ಸಿಬ್ಬಂದಿ ಹೇಳಿದ್ದಾರೆ ಅಂಥ ಈ ಸಹೋದರ ನನ್ನ ಬಳಿ ತಿಳಿಸಿದ..
ಇಲ್ಲಿ ನಾನು ಗಮನಿಸಿದ ವಿಷಯಗಳು,ಇಬ್ಬರೂ ಸಹೋದರ ಮುಖವೂ ಬಾಡಿ ಹೋಗಿತ್ತು, ಅವರ ಬಳಿ ಕೇಳಿದೆ ಯಾಕೆ ಸಪ್ಪಗಿದ್ದೀರಿ ಅಂಥ ಅದಕ್ಕೆ ಅವರು ನೀಡಿದ ಉತ್ತರ ನನಗೆ ಒಂದು ಕ್ಷಣ ಖುಷಿ ಸಂತೋಷ ವಾಯಿತು. ಖುಷಿಯಿಂದ ರಕ್ತದಾನ ಮಾಡಲು ಓಡೋಡಿ ಬಂದಿರುವೆವು ಆದರೆ ಆ ರೋಗಿಗೆ ಅವಶ್ಯಕವಾಗಿ ಬೇಕಾಗಿದ್ದ ರಕ್ತ ನಮ್ಮಿಂದ ದಾನಮಾಡಲು ಸಾಧ್ಯವಾಗಲಿಲ್ಲವಲ್ಲ. ಆ ಯುಕರು ಬೇರೆ ಯಾರೂ ಅಲ್ಲ, ನಬೀಲ್ ಹಾಗೂ ಪರ್ವೀಝ್. ರಕ್ತದಾನದ ಬಗ್ಗೆ ಅಮ್ಮೆಂಬಳದ ಯುವಕರ ಈ ಚಿಂತಣೆಗೆ ನಾನು ಆಭಾರಿಯಾಗಿರುವೆ ಅವರಿಗೆ ಹ್ಯಾಟ್ಸಾಪ್ ಅನ್ನುವೆ.
ರಕ್ತದಾನಿಗಳ ಊರು ಅಮ್ಮೆಂಬಳದ ಮಾದರಿ ಯುವಕರಿಗೆ PFI MEDICAL TEAM MALAR ಧನ್ಯವಾದಗಳನ್ನು ಸಮರ್ಪಿಸುತ್ತಿದೆ..
✍ ಶಮೀರ್ ಟಿಪ್ಪುನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.