(www.vknews.com) : SKSSF ಈಶ್ವರಮಂಗಲ ಕ್ಲಸ್ಟರ್ ವಿಖಾಯ ವತಿಯಿಂದ ನಿರ್ಗತಿಕ ಮಹಿಳೆಗಾಗಿ ಮೈದನಡ್ಕದಲ್ಲಿ ನಿರ್ಮಿಸಿದ “ಬೈತುಲ್ ಖಿದ್ಮಾ” ಇದರ ಕೀ ಅನ್ನು ಮನೆಯೊಡತಿಯ ಮಗನ ಕೈಗೆ ಇಂದು ಬೆಳಿಗ್ಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪಡುಮಲೆ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು, ಖತೀಬರಾದ ಶಂಸುದ್ದೀನ್ ದಾರಿಮಿ,Skssf ಪುತ್ತೂರು ವಲಯ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಕ್ಲಸ್ಟರ್ ಅಧ್ಯಕ್ಷರಾದ ಖಲೀಲ್ ರಹ್ಮಾನ್ ಅರ್ಷದಿ, ಪಾಳ್ಯತ್ತಡ್ಕ ಶಾಖೆ ಅಧ್ಯಕ್ಷ ಬಶೀರ್ ವಹಬಿ, ಕ್ಲಸ್ಟರ್ ಕಾರ್ಯದರ್ಶಿ ಯೂಸುಫ್ ಮುಂಡೋಳೆ, ಕೋಶಾಧಿಕಾರಿ ಕರೀಂ ಸುಳ್ಯಪದವು, ವಿಖಾಯ ಕನ್ವಿನರ್ ಶಂಸುದ್ದೀನ್ ಈಂದುಮೂಲೆ, ಸ್ವಾಬೀರ್ ಈಶ್ವರಮಂಗಲ, ಅಬ್ಬು ಜನಪ್ರೀಯ, ಹಮೀದ್ ಮೈದನಡ್ಕ, ಅಬ್ದುಲ್ಲ ಮೈದನಡ್ಕ ಮತ್ತಿತರರು ಉಪಸ್ಥಿತರಿದ್ದರು.
ವಿಖಾಯ ನನಗೆ ನೀಡಿರುವುದು ಬರಿಯ ಮನೆಯಲ್ಲ, ನನ್ನ ಮಗುವಿಗೊಂದು ಉಜ್ವಲ ಭವಿಷ್ಯವನ್ನು – ಮನೆಯೊಡತಿ
ಈಶ್ವರಮಂಗಿಲ ವಿಖಾಯ ಕ್ಲಸ್ಟರ್ ಸಹೋದರರೇ…. ಮಾತುಗಳ ಮೂಲಕ ವ್ಯಕ್ತಪಡಿಸಲಾಗದ ಕೃತಜ್ಞತೆಗಳು ಹೃದಯದಲ್ಲಿದೆ. ಕಾರಣ ತಾವುಗಳು ನನಗೆ ನೀಡಿರುವುದು ಬರಿಯ ಮನೆಯಲ್ಲ . ನನ್ನ ಮಗುವಿಗೊಂದು ಉಜ್ವಲ ಭವಿಷ್ಯವನ್ನು… ಮರುಭೂಮಿಯ ಮರಳುಗಾಡಿನಲ್ಲಿ ನೀರು ಕಾಣದೆ ಬತ್ತಿ ಬರಡಾಡ ಸಸಿಯೊಂದಕ್ಕೆ ನೀರನ್ನು ಉಣಿಸಿ ಪೋಷಿಸಿದಂತೆ , ನಿಮ್ಮ ಸಹಾಯವು ಕನಸುಗಳೇ ಬತ್ತಿಹೋದ ನನಗೆ ಮತ್ತೆ ಜೀವನದ ಕನಸನ್ನು ಚಿಗುರೊಡೆಸಿದೆ. ಕೆಲವು ವರ್ಷಗಳ ಹಿಂದೆ ಮಗುವೊಂದನ್ನು ಕರುಣಿಸಿ ಪತಿಯು ಕೈಬಿಟ್ಟು ಹೋದಾಗ ಆತನ ಬರುವಿಕೆಯನ್ನು ಕಾಯುತ್ತಿದ್ದ ನನಗೆ ನನ್ನ ಅಕ್ಕ ಹಾಗೂ ಅವಳ ಮಗ ಇದುವರೆಗೆ ಆಶ್ರಯ ನೀಡಿದರು. ನನ್ನ ಹಾಗೂ ಮಗನ ಸಂಪೂರ್ಣ ಹೊಣೆಯ ಜೊತೆಗೆ ಕುಟುಂಬದ ಹೊಣೆಯೂ ಆತನ ಮೇಲಿರುವುದರಿಂದ ನನ್ನ ಮನೆಯ ರಿಪೇರಿ ಆತನಿಗೆ ಕಷ್ಟಸಾಧ್ಯವಾಯಿತು. ಮನೆಯು ಬೀಳುವ ಸ್ಥಿತಿಯಲ್ಲಿ ಇದ್ದುದರಿಂದ ಮಗನ ಭವಿಷ್ಯದ ಚಿಂತೆಯೊಂದಿಗೆ ದಿನಕಳೆಯುತ್ತಿದ್ದ ನಾನು ಒಂದು ದಿನ ಆಶೀಂ ನಲ್ಲಿ ನನ್ನೆಲ್ಲಾ ದುಃಖವನ್ನು ವಿವರಿಸಿದಾಗ ಆತ ನನಗೆ ನೀಡಿದ ಭರವಸೆಯೇ “ವಿಖಾಯ”. ನನ್ನಿಂದ ಮನವಿ ಪತ್ರವನ್ನು ಬರೆಸಿಕೊಂಡ ಆಶಿಂ ಅದನ್ನು ತಲುಪಿಸಬೇಕಾದವರಿಗೆ ತಲುಪಿಸಿದ. ಇದಕ್ಕೆಲ್ಲಾ ಪ್ರಮುಖ ಕಾರಣಾದ ಆತನಿಗೆ ಅಲ್ಲಾಹನು ದೀರ್ಘಾಯುಷ್ಯ ಆಫಿಯತ್ ಕರುಣಿಸಲೀ….ಜಗತ್ತು ಮಹಾಮಾರಿ ಕೊರೋಣದಿಂದ ತತ್ತರಿಸಿ ಅಲ್ಲಾಹನ ಪರೀಕ್ಷೆಯ ಮುಂದೆ ತಲೆಬಾಗಿ ಲಾಕ್ಡೌನ್ ಆಗಿರುವ ಈ ಸಂದರ್ಭದಲ್ಲಿ ನನ್ನ ಮನೆಯ ಪರಿಸ್ಥಿತಿ ವೀಕ್ಷಿಸಲು ಬಂದ ಮರುದಿನವೇ ಕೆಲಸ ಆರಂಭಿಸಿದ್ದು ನನಗೆ ಅತೀವ ಸಂತೋಷವನ್ನು ನೀಡಿತು.
ಕೇವಲ ಮನೆಯ ಮಾಡಿನ ರಿಪೇರಿ ಮಾತ್ರ ನನ್ನ ವಿನಂತಿಯಾಗಿದ್ದರೂ ಸಂಪೂರ್ಣ ಮನೆಯನ್ನೆ ನಿರ್ಮಿಸಿ ,ವಿದ್ಯುತ್ ಸೌಕರ್ಯ ಒದಗಿಸಿ ಕೊಟ್ಟಿದ್ದೀರಿ . ಸ್ವಲ್ಪವೂ ಸಹಕರಿಸುವ ದಾರಿ ನನಗಿಲ್ಲದ ಕಾರಣ ಆ ಮನೆಯ ಸಂಪೂರ್ಣ ಹೊಣೆ ತಮ್ಮ ಮೇಲಾಯಿತು .ಅದಕ್ಕಾಗಿ ನಿಮ್ಮಲ್ಲಿ ವಿಷಾದಿಸುತ್ತೇನೆ.’ವಿಖಾಯ’ದ ಸಮವಸ್ತ್ರದೊಂದಿಗೆ ನಿಮ್ಮಲ್ಲರ ಉತ್ಸಾಹದ ಕೆಲಸಗಳು, ರಾತ್ರಿ ಹಗಲೆನ್ನದೆ ದುಡಿದ ನಿಸ್ವಾರ್ಥ ಸೇವೆಗೆ ಪ್ರತಿಫಲ ಅಲ್ಲಾಹನ ಸ್ವರ್ಗ ಮಾತ್ರ. ತನು ಮನ ಧನಗಳಿಂದ ಎಲ್ಲರೂ ಕೈ ಜೋಡಿಸಿ ,ಬಿಸಿಲು ಮಳೆ ಲೆಕ್ಕಿಸದೆ ತಾವು ನಿರ್ಮಿಸಿರುವುದು ನನಗೊಂದು ಮನೆಯಲ್ಲ . ಅದು ನಾಳೆ ಅಲ್ಲಾಹನ ಸ್ವರ್ಗೀಯ ಭವನದಲ್ಲಿ ಅಲ್ಲಾಹನು ನಿಮಗಾಗಿ ಕಾಯ್ದಿರಿಸಿದ ಅರಮನೆಯಾಗಿದೆ. ನಿಮ್ಮ ಈ ಸಹಕಾರ ಬೆಲೆ ಕಟ್ಟಲಾಗದ್ದು. ಮನೆಯ ಕೆಲಸ ನಡೆಯುವಾಗ , ತಾವು ಅದಕ್ಕೆ ಬೇಕಾದ ವಸ್ತುಗಳನ್ನು ತರುವಾಗ ನನ್ನ ಮಗನ ಮುಖದಲ್ಲಿ ಮೂಡುತ್ತಿದ್ದ ಆ ನಗು ನನ್ನ ಪಾಲಿಗೆ ಬೆಲೆ ಕಟ್ಟಲಾಗದ ಆನಂದವಾಗಿತ್ತು.ಇದಕ್ಕೆಲ್ಲಾ ಕಾರಣರಾದ ‘ವಿಖಾಯ’ದ ಪ್ರತಿಯೊಬ್ಬರಿಗೂ ಅಲ್ಲಾಹನು ಸುಖ-ಸಂತೋಷ ನೆಮ್ಮದಿಯ ಜೀವನ ನೀಡಿ ಅನುಗ್ರಹಿಸಲೀ… ನಶ್ವರವಾದ ಈ ಲೋಕದಲ್ಲಿ ಆಡಂಬರದ ಜೀವನವನ್ನು ನಾನು ಆಶಿಸಿಲ್ಲ.ನನ್ನ ಪಾಲಿಗೆ ಕನಸಾಗಿದ್ದ ಮನೆಯನ್ನು ನಿರ್ಮಿಸಿ ಬಿಸಿಲು ಮಳೆಗೆ ಮೈಯೊಡ್ಡಲು ನೆರಳು ನೀಡಿದ ತಮಗೆ ಅಲ್ಲಾಹನು ಹರ್ಶಿನ ನೆರಳು ನೀಡಿ ಅನುಗ್ರಹಿಸಲೀ….ದಣಿವಿರದ ನಿಮ್ಮ ಪರಿಶ್ರಮವು ನಿರಂತರ ಸಾಫಲ್ಯತೆಯನ್ನು ಕಾಣಲೀ…ಪರಸ್ಪರ ಸಹಕಾರದೊಂದಿಗಿನ ಈ ಸಹಬಾಳ್ವೆ ಅಂತ್ಯ ದಿನದವರೆಗೆ ನೆಲೆಗೊಳ್ಳಲಿ.ಅದಕ್ಕಾಗಿ ವಯಸ್ಸಿನ ಹಂಗಿಲ್ಲದೆ ಕೆಲಸದ ಮೂಲಕ , ಹಣದ ಮೂಲಕ,ಮಾರ್ಗದರ್ಶನದ ಮೂಲಕ, ಭರವಸೆಗಳ ಮೂಲಕ ಸಹಕರಿಸಿದ ಪ್ರತಿಯೊಬ್ಬರಿಗೂ ಅಲ್ಲಾಹನು ಅರ್ಹ ಪ್ರತಿಫಲ ನೀಡಲಿ… ತಮಗೆ ನಾನು ಚಿರ ಋಣಿ… ಈ ಸಹಕಾರಕ್ಕಾಗಿ ದುವಾ ಅಲ್ಲದೇ ಬೇರೇನೂ ನೀಡಲು ನನ್ನಿಂದ ಸಾಧ್ಯವಿಲ್ಲ. ಜೀವನದ ಕೊನೆಯವರೆಗೂ ನನ್ನ ಪ್ರಾರ್ಥನೆ ನಿಮ್ಮೆಲ್ಲರ ಮೇಲಿದೆ(ಇಂಶಾ ಅಲ್ಲಾಹ್) .
ವಿಖಾಯದ ನಿಸ್ವಾರ್ಥ ಸೇವೆಗೆ ಸದಾ ಸಮಯವೂ ನನ್ನ ಮಗನು ಸಿದ್ಧ. ಆತನನ್ನು ಸಂಪೂರ್ಣವಾಗಿ ವಿಖಾಯಾ ಸೇವೆಗೆ ಅರ್ಪಿಸುತ್ತೇನೆ. ಜಗತ್ತು ಆರ್ಥಿಕ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ತಾವೆಲ್ಲರೂ ತಮ್ಮ ಮನೆಯಂತೆ ಮುತುವರ್ಜಿ ವಹಿಸಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು. ‘ವಿಖಾಯ’ವನ್ನು ಇನ್ನಷ್ಟು ಉತ್ತಮ ಕಾರ್ಯಗಳಿಂದ ಅಲ್ಲಾಹನು ಗಟ್ಟಿಗೊಳಿಸಲೀ… ನನ್ನಂತಹ ಬಡವರ ಕಣೀರೊರೆಸಲು , ಇನ್ನಷ್ಟು ಕಾಲ ಸೇವೆ ಸಲ್ಲಿಸಲು ‘ವಿಖಾಯ’ ಭದ್ರವಾಗಲೀ… ನಮ್ಮೆಲ್ಲರ ಭಾವೀ ಜೀವನವು ಸಂತೋಷವಾಗಿರಲಿ. ಸಮಸ್ತದ ಅಗಲಿದ ನೇತಾರರ ದುವಾ ಎಲ್ಲರ ಮೇಲಿರಲೀ. ಅಲ್ಲಾಹನು ಅವನ ಜನ್ನಾತುಲ್ ಫಿರ್ದೌಸ್ನಲ್ಲಿ ನಮ್ಮೆಲ್ಲರನ್ನು ಒಂದು ಗೂಡಿಸಲೀ, ಆಮೀನ್
– ಹಾಜಿರಾ, ಮೈಂದನಡ್ಕ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.