ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96%,ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ 78% ಫಲಿತಾಂಶ ಪಡೆದಿದ್ದು, ಒಟ್ಟು ಶೇಖಡಾ 86 ಫಲಿತಾಂಶ ದಾಖಲಿಸಿದೆ. ಒಟ್ಟು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 12 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಆಶ್ವಿತಾ 566 ಅಂಕಗಳು (ಅರ್ಥಶಾಸ್ತ್ರ 100), ದೀಪ್ತಿ ಎನ್. 551 ಅಂಕಗಳು (ಲೆಕ್ಕಶಾಸ್ತ್ರ 100), ಗೌರವ್ 550 ಅಂಕಗಳು (ಇತಿಹಾಸ 100) ಹಾಗೂ ನವ್ಯ 550 ಅಂಕಗಳನ್ನು ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ 3 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಫಾತಿಮತ್ ನಿಶಾ 547 ಅಂಕಗಳು (ಇತಿಹಾಸ 100), ಫಾತಿಮತ್ ಫರ್ವೀನಾ 537 ಅಂಕಗಳು (ಇತಿಹಾಸ 100), ಹಾಗೂ ಆಯಿಶತುಲ್ ಜಿಸ್ತಿಯಾ 528 ಅಂಕಗಳನ್ನು ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 3 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಮುರ್ಷಿದಾ ಬಾನು 522 (ಗಣಿತ 100 ಅಂಕಗಳು), ಭವಿತ್ 516 ಅಂಕಗಳು ಹಾಗೂ ಮಹಮ್ಮದ್ ಆಸಿರ್ 512 ಅಂಕಗಳನ್ನು ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ 73 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 57 ವಿದ್ಯಾರ್ಥಿಗಳು ಉತ್ತೀರ್ಣ, ವಾಣಿಜ್ಯ ವಿಭಾಗದಲ್ಲಿ 76 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 73 ವಿದ್ಯಾರ್ಥಿಗಳು ಉತ್ತೀರ್ಣ ಹಾಗೂ ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಯೂಸುಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.