ಕತಾರ್(ವಿಶ್ವಕನ್ನಡಿಗ ನ್ಯೂಸ್): ನಾಲ್ಕೈದು ತಿಂಗಳುಗಳಿಂದ ಕತಾರಲ್ಲಿ ಬೀಡು ಬಿಟ್ಟಿರುವ ಕೊರೊನಾ ವೈರಸ್ ನಿಧಾನವಾಗಿ ತನ್ನ ಶಕ್ತಿ ಕಳೆದುಕೊಳ್ತಾ ಇದೆ, ಒಂದು ಲಕ್ಷಕ್ಕಿಂತಲೂ ಅಧಿಕ ಪಾಸಿಟಿವ್ ಪ್ರಕರಣಗಳು ಕತ್ತರಲ್ಲಿ ದಾಖಲಾಗಿದೆ, ದಿನಕ್ಕೆ ಸಾವಿರಕ್ಕಿಂತಲೂ ಅಧಿಕ ಪಾಸಿಟಿವ್ ಪ್ರಕರಣ ವರದಿಯಾದಾಗಲೂ ಸರಕಾರ ದೇಶವನ್ನು ಒಮ್ಮೆಯೂ ಸಂಪೂರ್ಣ ಲಾಕ್ಡೌನ್ ಮಾಡಿಲ್ಲ, ಕೊರೊನಾ ಎಂಬ ಮಹಾಮಾರಿಯನ್ನು ನಿಯಂತ್ರಿಸಲು ಕಟ್ಡುನಿಟ್ಡಿನ ನಿಯಮ ಜಾರಿಗೆ ತಂದು ಕೊರೊನಾ ವೈರಸ್ ಹರಡದಂತೆ ಸರಕಾರ ಮುಂಜಾಗ್ರತೆ ವಹಿಸಿತು..!
ಉಚಿತವಾಗಿ ಕೊರೊನಾ ಟೆಸ್ಟ್, ಅತ್ಯಾಧುನಿಕ ಸೌಲಭ್ಯದೊಂದಿಗೆ ಹದಿನಾಲ್ಕು ದಿನಗಳ ಉಚಿತ ಕ್ವಾರಂಟೈನ್, ಸ್ವದೇಶಿ ವಿದೇಶಿ ಎಂಬ ತಾರತಮ್ಯ ಮಾಡದೇ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ಕೊಡುವ ಮೂಲಕ ಸರಕಾರ ಮಹಾಮಾರಿಯ ವಿರುದ್ದ ಸಮರ ಸಾರಿ ರೋಗಿಗಳನ್ನು ರೋಗದಿಂದ ಮುಕ್ತಿಗೊಳಿಸಲು ಸಫಲವಾಗಿದೆ.
ಸುಮಾರು 105,477 ಕೋವಿಡ್ ಪಾಸಿಟಿವ್ ಪ್ರಕರಣಗಳು ಕತ್ತರಲ್ಲಿ ದಾಖಳಾಗಿದೆ, ಅದರಲ್ಲಿ 152 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 102,168 ಪಾಸಿಟಿವ್ ರೋಗಿಗಳು ರೋಗವಿಮುಕ್ತಿ ಹೊಂದಿದ್ದಾರೆ, ಉಳಿದಿರುವ ರೋಗಿಗಳು ಕೇವಲ 3 ಸಾವಿರದಷ್ಟು ಮಾತ್ರ.
ಮೊದಲು ಟೆಸ್ಟ್ ಮಾಡಿದ ಸಂಖ್ಯೆಯಲ್ಲಿ ಶೇಕಡಾ ನಲುವತ್ತರಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾಗುತಿತ್ತು, ಈಗ ಹದಿನೈದು ಶೇಖಡಾ ಪ್ರಕರಣಗಳು ದಾಖಳಾಗುತ್ತಿದೆ, #ಇನ್ಷಾ ಅಲ್ಲಾಹ್ ಇದೇ ರೀತಿ ಮುಂದುವರೆದರೆ ಇದೇ ತಿಂಗಳಲ್ಲಿ ಕತಾರ್ ಕೊರೊನಾ ಮುಕ್ತ ದೇಶವಾಗುದರಲ್ಲಿ ಸಂಶಯವಿಲ್ಲ..!
ಇಲ್ಲಿನ ಆಡಳಿತಾಧಿಕಾರಿ #ಶೈಕ್ ತಮೀಮ್ ಬಿನ್ ಹಮದ್ ಅಲ್ ಥಾನಿಯ ಕೊರೊನಾ ವಿರುದ್ದದ ಸಮರವು ಬಹುತೇಕ ಯಶಸ್ವಿಯಾಗುದರೊಂದಿಗೆ, ಕೊರೊನಾ ಪೀಡಿತ ದೇಶಗಳಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ಮಹಾಮಾರಿ ಕೊರೊನಾ ವೈರಸಿನಿಂದ ಜಗತ್ತು ಆದಷ್ಟು ಬೇಗ ಮುಕ್ತಿಹೊಂದಲಿ, ಲೋಕವು ಶಾಂತಿ ಸಮಾಧಾನದ ಜೊತೆಗೆ ವೈರಸ್ ಮುಕ್ತ ಬದುಕು ಕಾಣಲಿ….!
ಕೃಪೆ: ಫೇಸ್ಬುಕ್ ಪೋಸ್ಟ್..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.