ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ದೇಶದಲ್ಲಿ ಕೋವಿಡ್-19 ಕೊರೋನ ವೈರಸ್ ಅಟ್ಟಹಾಸ ಮೆರೆಯುತ್ತಿದೆ, ಕಳೆದ ಒಂದೇ ದಿನದಲ್ಲಿ 36247 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10,04652 ಕ್ಕೇರಿದೆ.
ಕಳೆದ ದಿನ 690 ಮಂದಿ ಕೊನೆಯುಸಿರೆಳೆದಿದ್ದು, ಮೃತರಾದವರ ಸಂಖ್ಯೆ 25,594 ಕ್ಕೇರಿದೆ. ಈವರೆಗೆ 6,36,569 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ, ಎಚ್ಚರಿಕೆಯಿಂದಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.