ಯುಎಇ (ವಿಶ್ವ ಕನ್ನಡಿಗ ನ್ಯೂಸ್):ಮಹತ್ವದ ಬೆಳವಣಿಗೆಯಲ್ಲಿ ಅಮೇರಿಕ-ಇಸ್ರೇಲ್-ಯುಎಇ ಜತೆಗೂಡಿ ಫೆಲೆಸ್ತೀನ್ ವಿಚಾರದಲ್ಲಿ ಒಪ್ಪಂದಕ್ಕೆ ಬರಲಾಗಿದ್ದು,ಫೆಲೆಸ್ತೀನ್ ನ ಮಣ್ಣಿನಲ್ಲಿ ತಾನು ನಡೆಸುತ್ತಿರುವ ವಿಸ್ತರಣೆ ನಿಲ್ಲಿಸುವುದಾಗಿ ಇಸ್ರೇಲ್ ಒಪ್ಪಿದೆ, ಮಾತ್ರವಲ್ಲ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ಬಲಪಡಿಸುವಲ್ಲಿ ಮುಂದಿನ ದಿನಗಳಲ್ಲಿ ತಾನು ಪಾತ್ರವಹಿಸುವುದಾಗಿ ಯುಎಇ ಯ ಸೇನೆಯ ಉಪಕಮಾಂಡರ್ ಹಾಗು ಅಬುಧಾಬಿಯ ರಾಜಕುಮಾರರೂ ಆಗಿರುವ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.ಮೂರು ದೇಶಗಳ ನಾಯಕರ ನಡುವೆ ಫೋನ್ ಮಾತುಕತೆಯ ಮೂಲಕ ಈ ಒಪ್ಪಂದಕ್ಕೆ ಬರಲಾಗಿದೆ.ಮಸ್ಜಿದುಲ್ ಅಕ್ಸಾಕ್ಕೆ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದ ವಿಶ್ವಾಸಿಗಳು ಹೋಗಿ ಪ್ರಾರ್ಥಿಸುವ ಉದ್ದೇಶವನ್ನು ಮುಂದಿಟ್ಟು ಶಾಂತಿ ಮಾತುಕತೆ ನಡೆಸಲಾಗುತ್ತಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.