ಇಡ್ಕಿದು (www.vknews.com) : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ ಕೋಲ್ಪೆ -ಇಡ್ಕಿದು ಇದರ ವತಿಯಿಂದ 7ನೇ ವರ್ಷದ ಬೃಹತ್ ಬುರ್ದಾ ಮಜ್ಲಿಸ್ ಇಷ್ಕೇ ಮದೀನ 2021 ಕಾರ್ಯಕ್ರಮ ಜನವರಿ23 ನೇ ತಾರೀಕು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ವಠಾರದಲ್ಲಿ ” ಮರ್ಜಾನುತೈಬಾ ಬುರ್ದಾ ಫೌಂಡೇಶನ್ ಬೆಳ್ತಂಗಡಿ ” ತಂಡ ದವರಿಂದ ನಡೆಯಲಿದೆ.
ಬದ್ರಿಯಾ ಜುಮಾ ಮಸೀದಿಯ ಖತೀಬ್ ಬಹುI ನಿಸಾರ್ ಸಖಾಫಿ ಅಲ್ ಅಝಹರಿ ಉದ್ಘಾಟನೆ ಹಾಗೂ ದುವಾ ನೇತೃತ್ವ ವಹಿಸುವರು. ಮಸೀದಿ ಅಧ್ಯಕ್ಷ ಕೆ.ಎಸ್ ಶೇಕಬ್ಬ ಕೋಲ್ಪೆ ಅಧ್ಯಕ್ಷತೆ ವಹಿಸುವರು. ಬಹುI ಟಿ. ಎಂ ಅಬ್ದುರ್ರಹ್ಮಾನ್ ಸಖಾಫಿ ಸದರ್ ಮುಅಲ್ಲಿಂ ಕೋಲ್ಪೆ ಇವರು ಸ್ವಾಗತ ಭಾಷಣ ಮಾಡುವವರು.
ಆಲಾಪನೆ:ಅನ್ಸಾರ್ ಸಖಾಫಿ ಮುಕೈ, ಖತೀಬರು ಜುಮ್ಮಾ ಮಸೀದಿ ಬದ್ಯಾರ್
ನಅತೇ ಶರೀಫ್ : ಶಿಹಾನ್ ಉಳ್ಳಾಲ. ಮದ್ ಗಾನ : ಮುಅಝ್ ಕಾಟಿಪಳ್ಳ. ಮಾಸ್ಟರ್ ಮುಝಮ್ಮಿಲ್ ಆತೂರ್. ಸಲೀಮ್ ಜಾರಿಗೆಬೈಲ್ ಇವರಿಂದ ನಡೆಯಲಿದೆ ಎಂದು ಬುರ್ದಾ ಸಮೀತಿ ಅಧ್ಯಕ್ಷ ಮೊಹಮ್ಮದ್ ಅನ್ಸಾರ್ ಕೋಲ್ಪೆ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.