ದುಬೈ(www.vknews.in): ಯುಎಇಯಲ್ಲಿ ಕೊವಿಡ್ ಸಾಂಕ್ರಾಮಿಕ ಪ್ರಾರಂಭವಾದ ನಂತರ ಪ್ರಥಮ ಬಾರಿಗೆ ದಿನವೊಂದರ ಅತೀ ಹೆಚ್ಚು ಕೊವಿಡ್ ಮರಣ ದಾಖಲಾಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ನಿನ್ನೆ (ಶನಿವಾರ) ಯುಎಇಯಲ್ಲಿ 2,631 ಹೊಸ ಪ್ರಕರಣಗಳು ಮತ್ತು 3,589 ರೋಗಮುಕ್ತಿ ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 15 ಸಾವುಗಳು ಸಂಭವಿಸಿವೆ. ಇದು ಯುಎಇಯಲ್ಲಿ ಕೊವಿಡ್ ಸಾಂಕ್ರಾಮಿಕ ಪ್ರಾರಂಭವಾದ ಅಂದಿನಿಂದ ಇದುವರೆಗಿನ ದಿನವೊಂದರ ಗರಿಷ್ಠ ಸಾವಿನ ಸಂಖ್ಯೆಯಾಗಿರುತ್ತದೆ. ಇದರೊಂದಿಗೆ ಒಟ್ಟು ಕೊವಿಡ್ ಬಲಿಗಳ ಸಂಖ್ಯೆ 1,000 ಗಡಿ ದಾಟಿದೆ.
ರಜಾದಿನಗಳಲ್ಲಿ ದೇಶಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿರುವುದರಿಂದ ವರ್ಷದ ಆರಂಭದಿಂದಲೂ ಹೊಸ ದೈನಂದಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಯುಎಇ ಆರೋಗ್ಯ ಸಚಿವಾಲಯ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.