ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಖಗೋಳಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ ಇಸ್ಲಾಮಿಕ್ ತಿಂಗಳ ದುಲ್ಹಜ್ ಜೂನ್ 30 ರಂದು ಗುರುವಾರ ಪ್ರಾರಂಭವಾಗುವ ಸಾಧ್ಯತೆಯಿದೆ. ಎಮಿರೇಟ್ಸ್ ಖಗೋಳವಿಜ್ಞಾನ ಸೊಸೈಟಿಯ ಪ್ರಕಾರ ಈದ್ ಅಲ್ ಅದ್ಹಾ ಹಬ್ಬವು(ದುಲ್ಹಜ್ 10) ಜುಲೈ 9 ರಂದು ಬರುವ ಸಾಧ್ಯತೆ ಇದೆ. ಅರಾಫಾ ದಿನ ಜುಲೈ 8 ರಂದು ಬರುವ ಸಾಧ್ಯತೆ ಇದೆ.
ಈದ್ ಹಬ್ಬವನ್ನು ಆಚರಿಸಲು ಯುಎಇ ನಿವಾಸಿಗಳಿಗೆ ನಾಲ್ಕು ದಿನಗಳ ರಜೆ ಸಿಗಲಿದ್ದು, ರಜೆಯು ಅರಾಫಾ ದಿನ ಮತ್ತು ಮೂರು ದಿನಗಳ ಈದ್ ಅಲ್ ಅದ್ಹಾ ವನ್ನು ಒಳಗೊಂಡಿರುತ್ತದೆ. ಖಗೋಳ ಲೆಕ್ಕಾಚಾರಗಳ ಪ್ರಕಾರ ರಜೆಯು ಜುಲೈ 8 ಶುಕ್ರವಾರ ದಿಂದ ಆರಂಭವಾಗಿ ಜುಲೈ 11 ಸೋಮವಾರ ದವರೆಗೆ ಇರಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.