ಒಮಾನ್ (ವಿಶ್ವ ಕನ್ನಡಿಗ ನ್ಯೂಸ್) : ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಸಲ್ಪಡುತ್ತಿರುವ ಮಹಿಳಾ ತರಗತಿಯ ಎರಡನೇ ವರ್ಷದ ತರಗತಿಗಳ ಉದ್ಘಾಟನೆಯನ್ನು ಇಂದು ಸಂಜೆ ಎಂಟು ಗಂಟೆಗೆ (ಭಾರತೀಯ ಸಮಯ 9:30) ಝೂಮ್ ಆಪ್ ಮೂಲಕ ನಡೆಯಲಿರುವುದು. ಕೆ ಸಿ ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಆಯ್ಯುಬ್ ಕೋಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೈಯ್ಯದ್ ಆಬಿದ್ ಆಟಕೋಯ ಅಲ್ ಹೈದ್ರೋಸಿಯವರು ದುಆ ಮತ್ತು ಆಶೀರ್ವಚನವನ್ನು ನೀಡಲಿದ್ದಾರೆ.
ತರಗತಿಗಳ ಉದ್ಘಾಟನೆಯನ್ನು ಡಾಕ್ಟರ್ ಅಬ್ದುರ್ರಶೀದ್ ಝೈನಿ ಕಾಮಿಲ್ ಸಾಖಾಫಿ ಉಸ್ತಾದರು ಮಾಡಲಿರುವರು. ಮುಖ್ಯ ಪ್ರಭಾಷಕರಾಗಿ ಖಾರಿ ಅಬ್ದುಲ್ ಜಲೀಲ್ ಇಮ್ದಾದಿ ಉಸ್ತಾದರು ಮಾತನಾಡಲಿರುವರು. ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಹಾಗೂ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರು ಪಾಲ್ಗೊಳ್ಳಲಿರುವರು.
ಮಹಿಳಾ ತರಗತಿಯು ಕಳೆದು ಒಂದು ವರುಷದಿಂದ ಬಹಳ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದ್ದು, ವಾರಕ್ಕೆ ಮೂರು ತರಗತಿಯಂತೆ ಐದು ವಿಷಯಗಳನ್ನೊಳಗೊಂಡು ಮೂರು ಅಧ್ಯಾಪಕಿಯರು ತರಗತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
🔸ಅಲ್ ಮುಜವ್ವಿದಾ ಸಈದಾ ಫಾತಿಮಾ ಅಲ್ ಮಾಹಿರಾ (ಪ್ರಾಂಶುಪಾಲರು ಕಮರಿಯ್ಯ ವಿಮೆನ್ಸ್ ಆಕಾಡೆಮಿ ಮಂಗಳೂರು) ಫಿಕ್ಹ್, 🔸 ಅಲ್ ಮುಜವ್ವಿದಾ ಫಾತಿಮಾ ಶಿಫಾನಾ ಅಲ್ ಮಾಹಿರಾ (ನಿಕಟಪೂರ್ವ ಮುದರ್ರಿಸತ್ ಮಿಸ್ಭಾ ವಿಮೆನ್ಸ್ ಕಾಲೇಜು, ಕೃಷ್ಣಾಪುರ ) ತಜ್ವೀದ್ ಹಾಗೂ ರೌಲಾತುಲ್ ಮುಹಬ್ಬತ್, 🔸 ಅಲ್ ಮುಜವ್ವಿದಾ ಆಶಿಖಾ ಜಿನಾನ್ (ನಿಕಟಪೂರ್ವ ಮುದರ್ರಿಸತ್ ಆಯೇಷಾ ಸ್ವಿದ್ದೀಖಾ ಮದರಸ,ಕೋಡಿ ಕುಂದಾಪುರ ) ಹದೀಸ್ ಹಾಗೂ ಅಝ್ಕಾರ್ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಹಲವಾರು ಮಹಿಳೆಯರು ತರಗತಿಯ ಪ್ರಯೋಜನವನ್ನು ಪಡೆಯುತ್ತಿದ್ದು, ಅಧ್ಯಾಪಕಿಯರ ಕಲಿಕಾ ಶೈಲಿಯು ಮನಮುಟ್ಟುವಂತಿದ್ದು ವ್ಯಾಪಕ ಪ್ರಶಂಷೆಗೆ ಪಾತ್ರವಾಗಿದೆ.
ಹಲವಾರು ಹೊಸ ಮಹಿಳಾ ವಿಧ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿದ್ದು, ಇತರರು ಯಾರಾದರೂ ನೋಂದಾಯಿಸಲು ಆಸಕ್ತರಿದ್ದಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಅದರೊಂದಿಗೆ ಇಂದು ಸಂಜೆ ನಡೆಯುವ ಉಧ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಾ ವಿಧ್ಯಾರ್ಥಿಗಳು, ಪೋಷಕರು, ಕೆಸಿಎಫ್ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ಕೋರಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.