ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ರಸ್ತೆಯಿಂದ ಕಾಂಕ್ರೀಟ್ ಬ್ಲಾಕ್ಗಳನ್ನು ತೆಗೆಯುವ ವಿಡಿಯೋ..
(ವಿಶ್ವ ಕನ್ನಡಿಗ ನ್ಯೂಸ್) : ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಅವರು ಡೆಲಿವರಿ ರೈಡರ್ ಅಬ್ದುಲ್ ಗಫೂರ್ ಅವರನ್ನು ಭೇಟಿ ಮಾಡಿದ್ದಾರೆ, ಗಫೂರ್ ಅವರು ರಸ್ತೆಯಿಂದ ಎರಡು ಕಾಂಕ್ರೀಟ್ ಬ್ಲಾಕ್ಗಳನ್ನು ತೆಗೆದುಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
An honor to meet you Abdul Ghafoor, a true example to be followed. pic.twitter.com/eRQ0nuYAZF — Hamdan bin Mohammed (@HamdanMohammed) August 11, 2022
An honor to meet you Abdul Ghafoor, a true example to be followed. pic.twitter.com/eRQ0nuYAZF
— Hamdan bin Mohammed (@HamdanMohammed) August 11, 2022
ಕಳೆದ ತಿಂಗಳು, ಶೇಖ್ ಹಮ್ದಾನ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಸ್ತೆಯಿಂದ ಕಾಂಕ್ರೀಟ್ ಬ್ಲಾಕ್ಗಳನ್ನು ತೆಗೆದು ವೈರಲ್ ಆಗಿದ್ದ ಡೆಲಿವರಿ ರೈಡರ್ ನನ್ನ ಶೀಘ್ರದಲ್ಲೇ ಭೇಟಿಯಾಗುತ್ತೇನೇ ಎಂದು ಪೋಸ್ಟ್ ಮಾಡಿದ್ದರು.
ಗುರುವಾರ ಲಂಡನ್ ನಿಂದ ಯುಎಇಗೆ ಮರಳಿದ ನಂತರ ಶೇಖ್ ಹಮ್ದಾನ್ ಅವರು ಮಾಡಿದ ಮೊದಲ ಕೆಲಸಗಳಲ್ಲಿ ಇದಾಗಿದೆ. ತಮ್ಮ Instagram ಸ್ಟೋರಿಯಲ್ಲಿ ಹಾಗು ಟ್ವಿಟ್ಟರ್ ನಲ್ಲಿ ಶೇಖ್ ಹಮ್ದಾನ್ ಅವರು ಅಬ್ದುಲ್ ಗಫೂರ್ ಅವರೊಂದಿಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಟ್ರಾಫಿಕ್ ಜಂಕ್ಷನ್ ನಲ್ಲಿ ಬಿದ್ದಿದ್ದ ಕಾಂಕ್ರೀಟ್ ಇಟ್ಟಿಗೆಗಳನ್ನು ತೆಗೆದು ಹೀರೊ ಆಗಿದ್ದ ಡೆಲಿವರಿ ರೈಡರ್ಗೆ ದುಬೈ ಕ್ರೌನ್ ಪ್ರಿನ್ಸ್ ಕರೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.