ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಚಿತ್ರೀಕರಣಕ್ಕೆ ಬಳಸಲಾಗಿದ್ದ 500 ರೂಪಾಯಿ ನೋಟುಗಳ ಮೂಟೆ ಅಟ್ಟಿಂಗಲ್ನ ಮಾಮಂ ನದಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿರುವುದು ಪತ್ತೆಯಾಗಿದೆ. ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ಪಂಡಲಕೋಡ್ ಎಂಬಲ್ಲಿ ಈ ಘಟನೆ ನಡೆದಿದೆ.
ಬೆಳಗ್ಗೆ ಸ್ನಾನಕ್ಕೆಂದು ಬಂದಿದ್ದ ಪಂತಲಕೋಡು ನಿವಾಸಿ ಬಿನು ರಾಮಚಂದ್ರನ್ ಎಂಬುವವರಿಗೆ ಮೊದಲು ಕಂಡಿದ್ದು ಎರಡು ಮೂಟೆ ತೇಲುತ್ತಿರುವುದು. ಕಟ್ಟುಗಳನ್ನು ದಡಕ್ಕೆ ತಂದು ಪರಿಶೀಲಿಸಿದಾಗ ಅವು 500ರ ನೋಟುಗಳ ಕಟ್ಟುಗಳೆಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನೋಟುಗಳನ್ನು ಸಿನಿಮಾ ಚಿತ್ರೀಕರಣಕ್ಕೆ ಬಳಸಿರುವುದು ಸ್ಪಷ್ಟವಾಯಿತು.
ಮಾಹಿತಿ ತಿಳಿದು ಸ್ಥಳೀಯರು ಜಮಾಯಿಸಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು. ನೋಟು ಚಿತ್ರೀಕರಣಕ್ಕೆ ಬಳಸಲಾಗಿದೆ ಎಂದು ಪೊಲೀಸರು ತೋರಿಸಿದಾಗ ಸ್ಥಳೀಯರು ಆಶ್ಚರ್ಯಚಕಿತರಾದರು. ನೋಟುಗಳನ್ನು ಅಟಿಂಗಲ್ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಎಸ್ಐ ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.