ಕತಾರ್(ವಿಶ್ವಕನ್ನಡಿಗ ನ್ಯೂಸ್): ಕತಾರ್ ನಲ್ಲಿ ನೆಲೆಸಿರುವ ಆದಿವಾಸಿ ಕನ್ನಡಿಗರು ಹಾಗೂ ಕರ್ನಾಟಕ ಸಂಘವು ೬೭ನೇ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಯೋಜಿಸಿದ “ಕೋಟಿ ಕಂಠ ಗಾಯನ”ದ ಅಡಿಯಲ್ಲಿ ೨೮ ಅಕ್ಟೋಬರ್ ೨೦೨೨ ರಂದು ಆಯೋಜಿಸಿದ “ನನ್ನ ನಾಡು ನನ್ನ ಹಾಡು” ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿತು.
ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಕೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು, ಕರ್ನಾಟಕ ಸಂಘ ಕತಾರ್ ನ ಆಡಳಿತ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ಸಂಘದ ಸದಸ್ಯರು ಕತಾರ್ ನ ಕಾಲಮಾನ ೧೧೦೦ ಗಂಟೆಗೆ ಹಾಡಿದರು.
View this post on Instagram A post shared by VK News (@vknews_media)
A post shared by VK News (@vknews_media)
ಗಾಯನ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಅಧ್ಯಕ್ಷರು ಶ್ರೀ ಮಹೇಶ್ ಗೌಡ ಅವರು ಭಾಗವಹಿಸಿದರು. ಗಾಯನದಲ್ಲಿ ಭಾಗವಹಿಸಿದ ಎಲ್ಲ ಗಾಯಕರು ಹಾಗೂ ಸಂಘದ ಸದಸ್ಯರಿಗೆ ಮಹೇಶ್ ಗೌಡ ಅವರು ಧನ್ಯವಾದಗಳನ್ನು ತಿಳಿಸಿದರು. ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಈ ಅಭಿಯಾನವನ್ನು ” ಗಿನೆಸ್ ವರ್ಲ್ಡ್ ರೆಕಾರ್ಡ್”ಗೆ ಸೇರಿಸಲಾಗುವುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.