ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ನೆರೆಹೊರೆಯವರು ಚಾಕುವಿನಿಂದ ಇರಿದ ಪರಿಣಾಮ ಮದರಸಾ ಶಿಕ್ಷಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಂದಮಂಗಲದ ಪಾತಿಮಂಗಲದ ಅಶ್ರಫ್ ಸಖಾಫಿ ಹಲ್ಲೆಗೊಳಗಾದವರು. ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು ಅಶ್ರಫ್ ಸಖಾಫಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕುಂದಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೂ ಆರೋಪಿಯನ್ನು ಹಿಡಿಯಲು ಸಾಧ್ಯವಾಗಿಲ್ಲ.
ಅಶ್ರಫ್ ಸಖಾಫಿ ಎಂಬವರನ್ನು ನೆರೆಮನೆಯ ಶಮೀರ್ ಎಂಬವರು ರಸ್ತೆಯಲ್ಲೇ ಚಾಕುವಿನಿಂದ ಕೊಚ್ಚಿ ಹೋಗಿದ್ದಾರೆ. ಅಶ್ರಫ್ ಸಖಾಫಿ ನೀಡಿದ ದೂರಿನನ್ವಯ ಶಮೀರ್ ಕತ್ತಿಯೊಂದಿಗೆ ಬಂದು ಮಕ್ಕಳು ಸೇರಿದಂತೆ ಜನರ ಮೇಲೆ ಹಲ್ಲೆಗೆ ಯತ್ನಿಸಿ ಮನೆಯ ಕಿಟಕಿ ಒಡೆದಿದ್ದಾರೆ. ಭಯದಿಂದ ಮನೆಯವರು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ವೈಯಕ್ತಿಕ ದ್ವೇಷವೇ ದಾಳಿಗೆ ಕಾರಣ. ಶಮೀರ್ ಈ ಹಿಂದೆಯೂ ಅಶ್ರಫ್ ಸಖಾಫಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂದು ಸ್ಥಳೀಯರು ಹೇಳುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.