(www.vknews.in)ಜನವರಿ 13, 2023, ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಆಟೋ ಎಕ್ಸ್ಪೋ ’23 ರ “ಎಥೆನಾಲ್ ಪೆವಿಲಿಯನ್ (ಮಳಿಗೆಯಲ್ಲಿ)” ನಲ್ಲಿ ಭಾಗವಹಿಸಿದೆ. ಇದು ಕಾರ್ಬನ್ ಶೂನ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಬಹು ಶಕ್ತಿ ಮಾರ್ಗ ವಿಧಾನದ ಮಹತ್ವವನ್ನು ಸಾರುತ್ತದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) ಆಯೋಜಿಸಿರುವ ಪೆವಿಲಿಯನ್ ಜಾಗೃತಿಯನ್ನು ಉತ್ತೇಜಿಸುವ ಮತ್ತು ಪರ್ಯಾಯ ಇಂಧನವಾಗಿ ಎಥೆನಾಲ್ ಅನ್ನು ಅಳವಡಿಸಿಕೊಳ್ಳುವುದನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ, ಆ ಮೂಲಕ ಈ ಕ್ಷೇತ್ರವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಥನಾಲ್ ಪೆವಿಲಿಯನ್ (ಮಳಿಗೆ) ಗೌರವಾನ್ವಿತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೋ ಹರ್ದೀಪ್ ಸಿಂಗ್ ಪುರಿ ಮತ್ತು ಭಾರತ ಸರ್ಕಾರದ ಗೌರವಾನ್ವಿತ ವಿದ್ಯುತ್ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜಾರ್ ಅವರಿಂದ ಉದ್ಘಾಟನೆಗೊಂಡಿದೆ.
ಸುಸ್ಥಿರತೆಯ ಚಾಂಪಿಯನ್ ಆಗಿ ಜಾಗತಿಕವಾಗಿ ಟೊಯೊಟಾ 2050 ರ ವೇಳೆಗೆ ಕಾರ್ಬನ್ ನ್ಯೂಟ್ರಾಲಿಟಿಗೆ ಬದ್ಧವಾಗಿದೆ ಮತ್ತು 2035 ರ ವೇಳೆಗೆ ಉತ್ಪಾದನಾ ಕಾರ್ಯಾಚರಣೆಗಳಲ್ಲಿ ನಿವ್ವಳ ಶೂನ್ಯ ಇಂಗಾಲವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಟೊಯೊಟಾ ಭಾರತದ ಇಂಧನ ಮಿಶ್ರಣ, ಅದರ ಅನನ್ಯ ಗ್ರಾಹಕ ಪ್ರೊಫೈಲ್ ಮತ್ತು ಅಗತ್ಯಗಳು, ಮೂಲಸೌಕರ್ಯ ಸಿದ್ಧತೆ ಮತ್ತು 2047 ರ ವೇಳೆಗೆ ಇಂಧನದಲ್ಲಿ ‘ಆತ್ಮ ನಿರ್ಭರ’ ಆಗಲು ಸರ್ಕಾರದ ವೈವಿಧ್ಯಮಯ ಪ್ರಯತ್ನಗಳಂತಹ ವಿವಿಧ ಅಂಶಗಳನ್ನು ಪರಿಗಣಿಸಿ ಅನೇಕ ಶುದ್ಧ ತಂತ್ರಜ್ಞಾನಗಳನ್ನು ಪರಿಚಯಿಸುವ ಮತ್ತು ಬೆಂಬಲಿಸುವ ಮೂಲಕ ಹೆಚ್ಚಿನ ಪರಿಣಾಮಕಾರಿಯಾಗಿ ಹಸಿರು ಚಲನಶೀಲತೆ ಪರಿಹಾರಗಳನ್ನು ಮುನ್ನಡೆಸುತ್ತಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ನ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ವಿಕ್ರಮ್ ಗುಲಾಟಿ ಅವರು ಮಾತನಾಡಿ, “ಟೊಯೊಟಾ ತನ್ನ ನಿರಂತರ ಪ್ರಯತ್ನಗಳನ್ನು ಮುಂದುವರಿಸುತ್ತದೆ ಮತ್ತು ಹಸಿರು ಚಲನಶೀಲತೆ ಕ್ಷೇತ್ರದಲ್ಲಿ ಸುಸ್ಥಿರ ತಾಂತ್ರಿಕ ಪ್ರಗತಿಗಳನ್ನು ಹಂಚಿಕೊಳ್ಳುವ ಮೂಲಕ ಭವಿಷ್ಯದ ಆವಿಷ್ಕಾರಗಳಿಗೆ ಕೊಡುಗೆ ನೀಡುತ್ತದೆ ಎಂದರು. ಟೊಯೊಟಾ ‘ಕಾರ್ಬನ್ ಶತ್ರು’ ಎಂದು ನಂಬುತ್ತದೆ, ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ಸ್ (SHEV ), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (PHEV), ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ಸ್ (BEV), ಫ್ಯೂಯಲ್-ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ (FCEV), ಫ್ಲೆಕ್ಸ್-ಫ್ಯೂಲ್ ಮತ್ತು ಫ್ಲೆಕ್ಸ್ ಫ್ಯೂಯೆಲ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (FFV-SHEV) ಮತ್ತು ಇತರ ಜೈವಿಕ ಇಂಧನ ವಾಹನಗಳು ಸೇರಿದಂತೆ ವಿವಿಧ ವಾಹನ ಪವರ್ಟ್ರೇನ್ ತಂತ್ರಜ್ಞಾನಗಳೊಂದಿಗೆ ಗ್ರಾಹಕರಿಗೆ ವ್ಯಾಪಕ ಆಯ್ಕೆಗಳನ್ನು ನೀಡುವುದನ್ನು ಮುಂದುವರಿಸಿದೆ. ಭಾರತದ ದೃಷ್ಠಿಯಿಂದ ಗಮನಿಸಿದರೆ, ಪಳೆಯುಳಿಕೆ ಇಂಧನ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸ್ಥಳೀಯ ಮತ್ತು ಶುದ್ಧ ಇಂಧನ ಮೂಲವಾಗಿರುವುದರಿಂದ ಎಥೆನಾಲ್ ಗೆ ದೊಡ್ಡ ಪಾತ್ರವನ್ನು ನಿರ್ವಹಿಸುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದರು.
ಆಟೋ ಎಕ್ಸ್ ಪೋ 2023 ರಲ್ಲಿ ಎಥೆನಾಲ್ ಪೆವಿಲಿಯನ್ ನ ಭಾಗವಾಗಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ದೇಶದಲ್ಲಿ ಇಂಧನ ಭದ್ರತೆ ಮತ್ತು ಹಸಿರು ಚಲನಶೀಲತೆಯನ್ನು ಉತ್ತೇಜಿಸಲು ಹೆಚ್ಚು ಸೂಕ್ತವಾದ ಪ್ರಾಯೋಗಿಕ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಸರ್ಕಾರ ಮತ್ತು ವಿವಿಧ ಪ್ರಮುಖ ಪಾಲುದಾರರ ಬಲವಾದ ಪ್ರಯತ್ನಗಳನ್ನು ನಮ್ಮ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದನ್ನು ಒತ್ತಿಹೇಳುತ್ತದೆ ಎಂದರು.
ಅತ್ಯಂತ ಸೂಕ್ತವಾದ ಆಯ್ಕೆಗಳಲ್ಲಿ ಒಂದಾಗಿ, ಎಥೆನಾಲ್ ಭಾರತಕ್ಕೆ ಅಪಾರ ಸಾಮರ್ಥ್ಯವನ್ನು ಹೊಂದಿದೆ ಏಕೆಂದರೆ ಇದು ದೇಶೀಯ ಮತ್ತು ನವೀಕರಿಸಬಹುದಾದ – ಶುದ್ಧ ಇಂಧನ ಮೂಲವಾಗಿದೆ, ಇದು ಪಳೆಯುಳಿಕೆ ಇಂಧನ ಬಳಕೆ, ಇಂಧನ ಆಮದು ಬಿಲ್ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕೃಷಿ ಆಧಾರಿತವಾಗಿರುವುದರಿಂದ, ಇಂಧನವಾಗಿ ಎಥೆನಾಲ್ ನ ಹೆಚ್ಚಿನ ಬಳಕೆಯು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಆ ಮೂಲಕ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಕೃಷಿ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಕೃಷಿ ತ್ಯಾಜ್ಯ (ಪರಾಲಿ)ಯಂತಹ ಕೃಷಿ ಅವಶೇಷಗಳಿಂದ ಎಥೆನಾಲ್ ಉತ್ಪಾದಿಸಲು ಸರ್ಕಾರವು ಇತ್ತೀಚೆಗೆ 2ನೇ ತಲೆಮಾರಿನ ತಂತ್ರಜ್ಞಾನಗಳನ್ನು ಪ್ರಾರಂಭಿಸಿದೆ.
ಭಾರತವು ಈಗಾಗಲೇ ನಿಗದಿತ ಸಮಯಕ್ಕಿಂತ ಐದು ತಿಂಗಳು ಮುಂಚಿತವಾಗಿ 10% ಎಥೆನಾಲ್ ಮಿಶ್ರಣವನ್ನು ಸಾಧಿಸಿದೆ. 2025-26 ರ ವೇಳೆಗೆ ಪೆಟ್ರೋಲ್ ನಲ್ಲಿ 20% ಎಥೆನಾಲ್ ಮಿಶ್ರಣದ ಅನುಷ್ಠಾನವು 86 ಮಿಲಿಯನ್ ಬ್ಯಾರೆಲ್ ಗ್ಯಾಸೋಲಿನ್ ಅನ್ನು ಬದಲಾಯಿಸುವ ನಿರೀಕ್ಷೆಯಿದೆ. ಆ ಮೂಲಕ ಭಾರತಕ್ಕೆ 30,000 ಕೋಟಿ ರೂಪಾಯಿಗಳ ವಿದೇಶೀ ವಿನಿಮಯ ಉಳಿತಾಯಕ್ಕೆ ಕಾರಣವಾಗುತ್ತದೆ. 10 ಮಿಲಿಯನ್ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. E20 ರವರೆಗೆ ಮತ್ತು ಅದರಾಚೆಗೆ ಅಸ್ತಿತ್ವದಲ್ಲಿರುವ ಎಥೆನಾಲ್ ಉತ್ಪಾದನೆಯ ಬೃಹತ್ ಸಾಮರ್ಥ್ಯವನ್ನು ಗಮನಿಸಿದರೆ, ಫ್ಲೆಕ್ಸಿ ಫ್ಯೂಯಲ್ ವೆಹಿಕಲ್ (FFV) ತಂತ್ರಜ್ಞಾನವನ್ನು ಪರಿಚಯಿಸುವುದರೊಂದಿಗೆ ಈ ಪ್ರಯೋಜನಗಳು ಬಹು-ಪಟ್ಟು ಹೆಚ್ಚಾಗಬಹುದು, ಇದು ಹೆಚ್ಚಿನ ಎಥೆನಾಲ್ ಮಿಶ್ರಣಗಳನ್ನು 20% ರಿಂದ 85% ಕ್ಕೆ ಫ್ಲೆಕ್ಸಿಬ್ಲಿಯಾಗಿ ಬಳಸಬಹುದು.
ಭಾರತದಲ್ಲಿ, ಟೊಯೊಟಾ ಇತ್ತೀಚೆಗೆ ಫ್ಲೆಕ್ಸಿ-ಫ್ಯೂಯಲ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ((FFV-SHEV) ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಈ ಕಾರ್ಯಕ್ರಮವು ಎಥೆನಾಲ್ ಅನ್ನು ಒಂದು ಪ್ರಮುಖ ದೇಶೀಯ, ಕಾರ್ಬನ್ ತಟಸ್ಥ ಶಕ್ತಿ ಮಾರ್ಗವಾಗಿ ಉತ್ತೇಜಿಸಲು ಮತ್ತು ಜಾಗೃತಿ ಮೂಡಿಸಲು ಟೊಯೊಟಾದ ಪ್ರಯತ್ನಗಳನ್ನು ಗುರುತಿಸಿತು, ಜೊತೆಗೆ ಸುಧಾರಿತ ಫ್ಲೆಕ್ಸಿ-ಫ್ಯೂಯೆಲ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನದೊಂದಿಗೆ ಭಾರತಕ್ಕೆ ನಿಜವಾದ ಸ್ವಾವಲಂಬನೆ ಸಾಧಿಸಲು ಮತ್ತು 2070 ರ ವೇಳೆಗೆ ಕಾರ್ಬನ್ ನೆಟ್-ಝೀರೋ ರಾಷ್ಟ್ರೀಯ ಗುರಿಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ. ಭಾರತದ ಹಿತದೃಷ್ಟಿಯಿಂದ ಸಂಗ್ರಹಿಸಿದ ದತ್ತಾಂಶವನ್ನು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನೊಂದಿಗೆ ಹಂಚಿಕೊಳ್ಳಲಾಗುವುದು, FFV / FFV-SHEVನ ವೆಲ್-ಟು-ವೀಲ್ ಇಂಗಾಲದ ಹೊರಸೂಸುವಿಕೆಯ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸುತ್ತದೆ.
ಪ್ರದರ್ಶನದಲ್ಲಿ, ಎಥೆನಾಲ್ ಪೆವಿಲಿಯನ್ ನಲ್ಲಿ, ಟೊಯೊಟಾದ ಫ್ಲೆಕ್ಸ್-ಫ್ಯೂಯಲ್ ವೆಹಿಕಲ್ (FFV) ಕೊಡುಗೆ ಇದೆ. ಇದಲ್ಲದೆ, ಫ್ಲೆಕ್ಸ್-ಇಂಧನ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (FFV-SHEV) ಅನ್ನು ಆಟೋ ಎಕ್ಸ್ಪೋ, 2023 ರ ಸ್ಟಾಲ್ ಸಂಖ್ಯೆ 10 ರಲ್ಲಿ ಪ್ರದರ್ಶಿಸಲಾಗುತ್ತಿದೆ. ಹಸಿರು ಮತ್ತು ಸ್ವಚ್ಛ ಕಾರ್ಯಕ್ರಮಗಳ ಶ್ರೇಣಿಯೊಂದಿಗೆ ಅದ್ಭುತ ಅನುಭವಕ್ಕಾಗಿ ಆಟೋ ಎಕ್ಸ್ ಪೋ 2023 ಮತ್ತು ಎಥೆನಾಲ್ ಪೆವಿಲಿಯನ್ ನಲ್ಲಿ ಟೊಯೊಟಾ ಬೂತ್ ಗೆ ಭೇಟಿ ನೀಡಲು ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ.
ಭಾರತೀಯ ಆಟೋಮೊಬೈಲ್ ಉದ್ಯಮವು ಭಾರತದ ಇಂಧನ ಭದ್ರತಾ ಮಿಷನ್ ಗೆ ಪ್ರಮುಖ ಕೊಡುಗೆದಾರರಲ್ಲಿ ಒಂದಾಗಿದೆ, ಪ್ರಮುಖ OEMs, ಉನ್ನತ ಉದ್ಯಮ ನಾಯಕರು ಮತ್ತು ತಜ್ಞರ ಗಮನಾರ್ಹ ಭಾಗವಹಿಸುವಿಕೆಯೊಂದಿಗೆ ಎಥೆನಾಲ್ ಪೆವಿಲಿಯನ್ ನಲ್ಲಿ ಪ್ರತಿನಿಧಿಸಲಾಗಿದೆ. ಈ ಮಹತ್ವದ ಸಮ್ಮೇಳನವು ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿವಿಧ ಎಥೆನಾಲ್ ಉತ್ಪಾದಕರು, ವಿಶ್ವವಿಖ್ಯಾತ ತಂತ್ರಜ್ಞಾನ ಪೂರೈಕೆದಾರರ ಉಪಸ್ಥಿತಿಗೆ ಸಾಕ್ಷಿಯಾಯಿತು. ಈ ಪೆವಿಲಿಯನ್ ಸ್ವಚ್ಛ ಇಂಧನ ಗುರಿಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಮಾಡಿದ ವಿಶೇಷ ಪ್ರಯತ್ನಗಳನ್ನು ಸಹ ಪ್ರತಿನಿಧಿಸುತ್ತದೆ. ಇಥೆನಾಲ್ ನ ಪ್ರಯೋಜನಗಳು ಮತ್ತು ಅವಕಾಶಗಳ ಬಗ್ಗೆ ತಜ್ಞರು ಮತ್ತು ವಿವಿಧ ಚಿಂತಕರ ಚಾವಡಿಗಳನ್ನು ಒಟ್ಟುಗೂಡಿಸಲು ಮತ್ತು ಡಿಕಾರ್ಬನೈಸೇಶನ್ ಗಾಗಿ ವಾಹನ ಪರಿಸರ ವ್ಯವಸ್ಥೆಯ ಸಿದ್ಧತೆಯ ಬಗ್ಗೆ ಚರ್ಚಿಸಲು ಇಂದು ಒಂದು ದಿನದ ಸಮ್ಮೇಳನವನ್ನು “ಚಲನಶೀಲತೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪರಿಸರ-ಶಕ್ತಿಗಾಗಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ (ISTEM)” ಎಂಬ ವಿಷಯದೊಂದಿಗೆ ಆಯೋಜಿಸಲಾಗಿದೆ. ಇಂಧನ ಅವಲಂಬನೆ, ವ್ಯಾಪಕವಾದ ಎಥೆನಾಲ್ ಪರಿಸರ ವ್ಯವಸ್ಥೆಯ ಆರ್ಥಿಕ ಪ್ರಯೋಜನಗಳು, ಜೈವಿಕ ಇಂಧನಗಳ ಮೂಲಕ ಇಂಧನ ಸುರಕ್ಷತೆ ಮತ್ತು ಆ ಮೂಲಕ ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುವ ಗುರಿಯೊಂದಿಗೆ ಜಾಗತಿಕವಾಗಿ ಅಳವಡಿಸಿಕೊಳ್ಳಲಾದ ಸಮಗ್ರ ಮಾರ್ಗಗಳ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳುವುದನ್ನು ಸಹ ಸೆಷನ್ ಗಳು ಒಳಗೊಂಡಿದ್ದವು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.