(www.vknews.in) ಪುತ್ತೂರು ತಾ 17/01/2023 ರಂದು ಪುತ್ತೂರು ಕೊಂಬೆಟ್ಥು ವಿನಲ್ಲಿರುವ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ “ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಂಘವಾಗಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಂಚಾರಿ ನಿಯಮ ಪಾಲನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪುತ್ತೂರು ನಗರ ಠಾಣೆಯ ಸಂಚಾರಿ ನಿರೀಕ್ಷಕರಾದ ಶ್ರೀ ಕುಟ್ಟಿ ಎಮ್.ಕೆ ಯವರು ವಾಹ ಓಡಿಸುವ ಬಗ್ಗೆ,ಹೆಲ್ಮೆಟ್ ದರಿಸುವ ಬಗ್ಗೆ ,ಅಪರಾದ ದಂಡದ ಬಗ್ಗೆ,ಜಾಗ್ರತಾ ನಿಯಮದ ಬಗ್ಗೆ ಲೈಸನ್ಸ್ ಮಿತಿ ಬಗ್ಗೆ,ಇನ್ನಷ್ಟು ಅಗತ್ಯ ವಿಷಯಗಳ ಬಗ್ಗೆ ಮಾಹಿತಿ ನೀಡಿದರು ನೀಡಿದರು.
ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ರೋಟರಿ ಕ್ಲಬ್ ಅದ್ಯಕ್ಷರಾದ ಮೊಹಮ್ನದ್ ರಫ಼ೀಕ್ ದರ್ಬೆ ವಹಿಸಿದ್ದರು. ಅಥಿತಿಯಾಗಿ ರೋಟರಿ ಸೆ೦ಟ್ರಲ್ ನ ಕಾರ್ಯದರ್ಶಿ ಚಂದ್ರಹಾಸ ರೈ ಯವರು ಮಾತನಾಡಿ ಪೋಲೀಸ್ ಇಲಾಖೆ ನಮ್ಮ ರಕ್ಷಣೆಗಾಗಿ ನೀಡುವ ಪ್ರತೀ ವಿಷಯವನ್ನು ಚಾಚು ತಪ್ಪದೆ ನಿರ್ವಹಿಸಿದಾಗ ಅಫಘಾತ ಗಳು ಕಡಿಮೆಯಾಗಿ ನಮ್ಮ ಸುರಕ್ಷತೆ ಕಾಪಾಡಬಹುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಎ.ಎಸ್.ಐ. ಕುಶಾಲಪ್ಪ, ಹೈಸ್ಕೂಲಿನ ಪ್ರಭಾರ ಮುಖ್ಯ ಗುರುಗಳಾದ ಶ್ರೀಮತಿ ಮಮತಾ ರೈ, ರೋಟರಿ ಕ್ಲಬ್ ಸೆ೦ಟ್ರಲ್ ಸ್ಥಾಪಕಾದ್ಯಕ್ಷ ರೋ ಸಂತೋಷ್ ಶೆಟ್ಟಿ, ಉಪಾದ್ಯಕ್ಷರಾದ ರೋ ಅಶೋಕ್ ನಾಯ್ಕ್ ಕೆದಿಲ ಉಪಸ್ತಿತರಿದ್ದರು. ಐ ಪಿ ಪಿ ರೋ ನವೀನ್ ಚಂದ್ರ ನಾಯ್ಕ್,ರೋ ಅಶ್ರಫ಼್ ಮುಕ್ವೆ,ರೋ ಜಯಪ್ರಕಾಶ್ ನಾಯ್ಕ್,ರೋ ಜಯಪ್ರಕಾಶ್ ಅಮೈ ಯವರು ಕಾರ್ಯಕ್ರಮದಲ್ಲಿ ಬಾಗವಹಿಸಿದರು. ಈ ಕಾರ್ಯಕ್ರಮವನ್ನು ರೋಟರಿ ಸೆ೦ಟ್ರಲ್ ನ ತಿಂಗಳ ಸಂಯೋಜಕರಾದ ಅಶೋಕ್ ನಾಯ್ಕ ಕೆದಿಲ ಆಯೋಜಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.