ಜೆದ್ದಾ(www.vknews.in): ಇತ್ತೀಚೆಗೆ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಪರಿಣಾಮವಾಗಿ ಸಾವಿರಾರು ಜನರು ಮೃತರಾಗಿದ್ದು, ಅನೇಕ ಮನೆಗಳು ನೆಲಸಮವಾಗಿ ಎರಡೂ ರಾಷ್ಟ್ರಗಳ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಅನ್ನ ಹಾಗೂ ನೀರಿಗಾಗಿ ಪರದಾಡುತ್ತಿದ್ದು, ಬಹುತೇಕರು ಭೂಕಂಪ ಸಂತರ್ರಸ್ತರ ಶಿಬಿರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಭೂಕಂಪ ಸಂತ್ರಸ್ತರಿಗಾಗಿ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಇದರಲ್ಲಿ ಸೌದಿ ಅರೇಬಿಯಾವು ಮುಂಚೂಣಿಯಲ್ಲಿದೆ. ಕಿಂಗ್ ಸಲ್ಮಾನ್ ರಿಲೀಫ್ ಫಂಡ್ ಮೂಲಕ ಈಗಾಗಲೇ ಸರಿ ಸುಮಾರು 800 ಕೋಟಿ ರಿಯಾಲ್ ಗಳಿಗಿಂತಲೂ ಅಧಿಕ ಹಣವನ್ನು ಸೌದಿ ಅರೇಬಿಯಾವು ಈ ಎರಡೂ ಸಂತ್ರಸ್ತ ರಾಷ್ಟ್ರಗಳಿಗೆ ನೀಡಿದೆ. ಅಲ್ಲದೆ ಸಂತ್ರಸ್ತರಿಗಾಗಿ ತುರ್ಕಿ ಹಾಗೂ ಸಿರಿಯಾಗಳಲ್ಲಿ 3000 ಮನೆಗಳ ನಿರ್ಮಾಣಕ್ಕೆ ಸೌದಿ ಸರಕಾರವು ಮುಂದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.