ಕಾಞಂಗಾಡ್ (ವಿಶ್ವ ಕನ್ನಡಿಗ ನ್ಯೂಸ್) : ಮನೆಯ ಬೆಡ್ ರೂಮಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಾಳಿಂಗಲ್ ಎನ್ನಪರದ ದಿವಂಗತ ಶಂಸುದ್ದೀನ್ ಮತ್ತು ಮಿಸ್ರಿಯಾ ದಂಪತಿಯ ಪುತ್ರಿ ಫಾತಿಮಾ (18) ಮೃತರು. ಫಾತಿಮಾ ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ.
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಫಾತಿಮಾಳ ಮದುವೆ ನಿಶ್ಚಯವಾಗಿತ್ತು. ಅವರ ತಂದೆ ಶಂಶುದ್ದೀನ್ ಎರಡು ವರ್ಷಗಳ ಹಿಂದೆ ಕೋವಿಡ್ನಿಂದ ನಿಧನರಾದರು. ಒಡಹುಟ್ಟಿದವರು: ಸಫಿದಾ, ಮಹಮ್ಮದ್, ಮೂಸಕುಂಜಿ ಮತ್ತು ನಿಜಾಮ್. ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.