ಜೆದ್ದಾ(www.vknews.in): ಕರೋನವೈರಸ್ (ಕೋವಿಡ್ -19) ಹರಡುವುದನ್ನು ತಡೆಯಲು ಪ್ರತಿರಕ್ಷಣೆಯ ಪುನಃ ಸಕ್ರಿಯಗೊಳಿಸುವ (ರೀ ಆಕ್ಟಿವೇಷನ್ )ಡೋಸ್ ಪೂರ್ಣಗೊಳಿಸಲು ಎಲ್ಲಾ ವಯಸ್ಸಿನ ನಾಗರಿಕರು ಮತ್ತು ನಿವಾಸಿಗಳಿಗೆ ಸೌದಿ ಆರೋಗ್ಯ ಸಚಿವಾಲಯ ಕರೆ ನೀಡಿದೆ. ಕೊವಿಡ್ ಲಸಿಕೆಯ ಮೊದಲ ಬೂಸ್ಟರ್ ಡೋಸ್ ಪಡೆದು 2 ತಿಂಗಳು ಕಳೆದ ನಂತರ ಈ ರೀ ಆಕ್ಟಿವೇಷನ್ ಡೋಸ್ ಪಡೆಯಬಹುದಾಗಿದೆ. 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹಿಂದಿನ ಡೋಸ್ ಅನ್ನು ಸ್ವೀಕರಿಸಿದ ನಂತರ ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕಳೆದವರು ಕರೋನಾ ಕೋವಿಡ್ -19 ಲಸಿಕೆಯ ನವೀಕರಿಸಿದ ಡೋಸ್ ಅನ್ನು ಸ್ವೀಕರಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಇದಕ್ಕಾಗಿ ಅಪಾಯಿಂಟ್ಮೆಂಟ್ ಈಗ ಸ್ವಾಹತಿ ಅಪ್ಲಿಕೇಶನ್ನಲ್ಲಿ ಲಭ್ಯವಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.