ಕೊಂಡಂಗೇರಿ(ವಿಶ್ವಕನ್ನಡಿಗ ನ್ಯೂಸ್): ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್, ಹಾಯಾತುಲ್ ಇಸ್ಲಾಂ ಮದ್ರಸ, ಮಿಅರಾಜುಲ್ ಉಲೂಂ ದರ್ಸ್ ,KMJ, SYS ಮತ್ತು SSF ಇವುಗಳ ಸಂಯುಕ್ತ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಂಡಂಗೇರಿ ಶಾಲಾ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಯೂಸುಫ್ ಹಾಜಿ ಕೆ.ಕೆ ದ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ವಿದ್ಯುಕ್ತಿವಾಗಿ ಚಾಲನೆ ನೀಡಿದರು. SSF ಕಾರ್ಯದರ್ಶಿ ಹನೀಫ್ ಪಿ. ಎಂ ಸ್ವಾಗತಿಸಿ ಸದರ್ ಮುಅಲ್ಲಿಂ ಹಾಫಿಜ್ ಫತ್ತಾಹ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ಥಳೀಯ ಮುದರ್ರಿಸ್ ಬಹು.ಉಸ್ತಾದ್ ಮುಹಮ್ಮದ್ ಸ್ವಾದಿಖ್ ಸಖಾಫಿ ದುಆ ನೆರವೇರಿಸಿ ಮುಖ್ಯ ಪ್ರಭಾಷಣ ಗೈದು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ಗಮನ ಸೆಳೆದರು. ಹನೀಫ್ ಸಖಾಫಿ, ಸುಲೈಮಾನ್ ಮಾಸ್ಟರ್, ಹನೀಫ್ H. H ಶುಭಾಶಯ ಭಾಷಣ ಮಾಡಿ ಸ್ವಾತಂತ್ರ್ಯದ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಹಾಯಾತುಲ್ ಇಸ್ಲಾಂ ಮದ್ರಸದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸನ್ಮಾನ ವಿತರಿಸಲಾಯಿತು. ಕೊನೆಯಲ್ಲಿ SYS ಕಾರ್ಯದರ್ಶಿ ಮುಹಮ್ಮದ್ ಫೈಝಲ್ ಜೆ. ಎಸ್ ವಂದನಾರ್ಪಣೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.