ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕಥನ ಕರ್ನಾಟಕ ಬೆಂಗಳೂರು ಪ್ರಕಟಿಸುವ ವಯನಾಡು ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆಯುವ ಭೂಮಿ ಮತ್ತು ಮನುಷ್ಯರು ಎಂಬ ಸಂವಾದ ಕಾರ್ಯಕ್ರಮದಲ್ಲಿ ಸುಳ್ಯದ ಸಾಹುಕಾರ್ ಅಚ್ಚುರವರು ಭಾಗವಹಿಸಲಿದ್ದಾರೆ.
ಇವರು ವಯನಾಡಿನ ದುರಂತ ನಡೆದ ನಂತರ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ಅಲ್ಲಿನ ಸ್ಥಿತಿಗತಿಗಳನ್ನು ತಮ್ಮ ಅನುಭವದಂತೆ ಬರವಣಿಗೆಗಿಳಿಸಿ ಸೋಷಿಯಲ್ ಮೀಡಿಯಾ ಮೂಲಕ ಕನ್ನಡಿಗರಿಗೆ ತಲುಪಿಸಿ ವೈರಲ್ ಆಗಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಚಿತ್ರನಟ ಕಿಶೋರ್ ಪತ್ನಿ ಖ್ಯಾತ ಪರಿಸರ ತಜ್ಞೆ ವಿಶಾಲಾಕ್ಷಿ ಮತ್ತು ವಯನಾಡು-ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು ಕೃತಿಯ ಲೇಖಕ ಆಶಿಕ್ ಮೂಲ್ಕಿ ಭಾಗವಹಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.