ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಆಟೋ ರಿಕ್ಷಾ ದರ ಪರಿಷ್ಕರಣೆಯ ಮೀಟರ್ ಸತ್ಯಾಪನೆ ಮತ್ತು ತೂಕ ಮಾಪನ ಶಾಸ್ತ್ರ ಇಲಾಖೆಯ ಧ್ರಡೀಕರಣ ಮಾಡುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಡೀಲರ್ ಗಳು ದುಬಾರಿ ವೆಚ್ಚ ನಿಗದಿ ಪಡಿಸಿರುವುದನ್ನು ಆಕ್ಷೇಪ ವ್ಯಕ್ತಪಡಿಸಿ ಎಸ್ಡಿಟಿಯು ಅಧೀನದಲ್ಲಿರುವ ಸೋಷಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ದಕ ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪರಿಷ್ಕ್ರತ ಆಟೋ ರಿಕ್ಷಾ ದರ ಅನ್ವಯವಾಗುವಂತೆ ಆಟೋ ರಿಕ್ಷಾ ಮೀಟರ್ ದರವನ್ನು ಸತ್ಯಾಪನೆ ಮಾಡಿ ಸಂಬಂಧಪ್ಪಟ್ಟ ಇಲಾಖೆಯಿಂದ ಧ್ರಡೀಕರಿಸಿ ಮರು ಸಂಗ್ರಹ ಮಾಡುವ ಪ್ರಕ್ರಿಯೆಗೆ ತಾಂತ್ರಿಕ ಡೀಲರ್ ಗಳು ಪ್ರತೀ ಆಟೋ ರಿಕ್ಷಾ ಗಳಿಗೆ 550 ರೂಪಾಯಿ ವೆಚ್ಚ ನಿಗದಿ ಪಡಿಸಿದ್ದಾರೆ, ಲಾಕ್ ಡೌನ್ ನಿಂದ ಕಂಗೆಟ್ಟ ಶ್ರಮಿಕ ವರ್ಗ ಆಟೋ ರಿಕ್ಷಾ ಚಾಲಕರಿಗೆ ಈ ವೆಚ್ಚ ಭರಿಸಲು ಅಸಾದ್ಯವಾಗುತ್ತಿದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ರಿಕ್ಷಾ ಚಾಲಕರ ಸಂಕಷ್ಟವನ್ನು ಅರ್ಥ ಮಾಡಿ ಈ ಪ್ರಕ್ರಿಯೆಗೆ ಕನಿಷ್ಠ ದರ ನಿಗದಿಪಡಿಸಲು ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಸ್ಡಿಟಿಯು ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ, ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ, ನಗರ ಸಮಿತಿ ಅಧ್ಯಕ್ಷ ಮಜೀದ್ ಉಳ್ಳಾಲ, ಕಾರ್ಯದರ್ಶಿ ಶೆರೀಫ್ ಕುತ್ತಾರ್, ಸದಸ್ಯರಾದ ಹರ್ಷದ್ ಕುದ್ರೋಳಿ, ಇಲ್ಯಾಸ್ ಬೆಂಗರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.