ಜೆದ್ದಾ(www.vknews.in): ಸೌದಿ ಜನತೆ ಕೊವಿಡ್ ನೊಂದಿಗೆ ಜೀವಿಸಲು ತೊಡಗಿದಂತೆಯೇ ರಾಷ್ಟ್ರಾದ್ಯಂತ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸಾಮುದಾಯಿಕ ಪ್ರಸರಣದಿಂದಾಗಿ ಹೆಚ್ಚಳ ಕಂಡಿದ್ದ ಕೊವಿಡ್ ಪ್ರಕರಣಗಳು ಕಳೆದೆರಡು ದಿನಗಳಿಂದ ಮತ್ತೆ ಇಳಿಮುಖವಾಗ ತೊಡಗಿದೆ. ಇಂದು 3393 ಹೊಸ ಪ್ರಕರಣಗಳು, 4045 ರೋಗಮುಕ್ತಿ ಹಾಗೂ 40 ಮರಣಗಳು ದಾಖಲಾಗಿದ್ದು, ಒಟ್ಟು 55830 ಕೊವಿಡ್ ಸೋಂಕಿತರು ಸೌದಿ ಅರೇಬಿಯಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 2021 ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.