ಮಕ್ಕಾ(www.vknews.in): ಕೊವಿಡ್-19 ಹರಡುವಿಕೆಯನ್ನು ತಡೆಯುವ ಪ್ರಯತ್ನವಾಗಿ ಮಕ್ಕಾದ ಮಸ್ಜಿದುಲ್ ಹರಮ್ ನ ದ್ವಾರಗಳಲ್ಲಿ ಯಾತ್ರಾರ್ಥಿಗಳ ಜ್ವರದ ತೀವೃತೆಯನ್ನು ಪತ್ತೆಹಚ್ಚುವ ಅತ್ಯಾಧುನಿಕ ‘ಥರ್ಮಲ್ ಕ್ಯಾಮರಾ’ಗಳನ್ನು ಅಳವಡಿಸಲಾಗಿದೆ. ಮಸ್ಜಿದುಲ್ ಹರಮ್ ನ ಕಿಂಗ್ ಫಹದ್ ದ್ವಾರ, ಇಸ್ಮಾಯಿಲ್ ದ್ವಾರ ಹಾಗೂ ಸಫಾ ದ್ವಾರಗಳಲ್ಲಿ ಈ ಕ್ಯಾಮಾರವನ್ನು ಅಳವಡಿಸಲಾಗಿದ್ದು, ಬುಧವಾರದಂದು ಮಕ್ಕಾ ಇಮಾಂ ಶೈಖ್ ಅಬ್ದುರ್ರಹ್ಮಾನ್ ಅಲ್ ಸುದೈಸಿಯವರು ಈ ಕ್ಯಾಮರಾಗಳನ್ನು ಉದ್ಘಾಟಿಸಿದರು. ಮಸ್ಜಿದುಲ್ ಹರಮ್ ಗೆ ಭೇಟಿ ನೀಡುವ ಯಾತ್ರಾರ್ಥಿಗಳ ದೇಹದ ಉಷ್ಣಾಂಶವು 37’ ಸೆಲ್ಷಿಯಸ್ ಗಿಂತ ಅಧಿಕವಿದ್ದರೆ ಈ ಕ್ಯಾಮರಾಗಳು ಪತ್ತೆ ಹಚ್ಚುತ್ತವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.